ಉಪ್ಪಿನಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಹೊಳೆಯಲ್ಲಿ ಪತ್ತೆ

Prasthutha|

ಉಪ್ಪಿನಂಗಡಿ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಉದನೆ ಸಮೀಪದ ಕಡೆಂಬಿಲದಲ್ಲಿ ನಾಪತ್ತೆಯಾಗಿದ್ದ ರೆಖ್ಯಾ ಗ್ರಾಮ ನಿವಾಸಿ ಲೋಕೇಶ್‌ (43) ಅವರ ಮೃತದೇಹ ಗುಂಡ್ಯ ಹೊಳೆಯಲ್ಲಿ ಬುಧವಾರ ಪತ್ತೆಯಾಗಿದೆ.

- Advertisement -

ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಊರ್ನಡ್ಕ ಮನೆ ನಿವಾಸಿಯಾಗಿರುವ ಲೋಕೇಶ್‌ ಅವರು ಮನೆಗೆ ಅಗತ್ಯ ಸೊತ್ತುಗಳನ್ನು ತರುತ್ತೇನೆಂದು ಸೋಮವಾರ ಸಾಯಂಕಾಲ ಬೈಕಿನಲ್ಲಿ ಮನೆಯಿಂದ ಹೋದವರು ಉದನೆ ಪೇಟೆಗೆ ಹೋಗಿ ಕಡೆಂಬಿಲ ಎಂಬಲ್ಲಿ ಬೈಕ್‌ ನಿಲ್ಲಿಸಿ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಲೋಕೇಶ್‌ ಮನೆಗೆ ಬಾರದೆ ಇದ್ದ ಕಾರಣಕ್ಕೆ ಕಡೆಂಬಿಲ ಎಂಬಲ್ಲಿನ ನದಿ ಪರಿಸರದಲ್ಲಿ ಅಗ್ನಿಶಾಮಕ ದಳ ಹಾಗೂ ಧರ್ಮಸ್ಥಳ ಶೌರ್ಯ ತಂಡದ ಸದಸ್ಯರು ಹುಡುಕಾಟದ ಕಾರ್ಯಾಚರಣೆ ನಡೆಸಿದ್ದರು. ಮಧ್ಯಾಹ್ನದ ವೇಳೆ ಗುಂಡ್ಯ ಹೊಳೆಯಲ್ಲಿ ಅವರ ಶವ ಪತ್ತೆಯಾಗಿದೆ.

ಮೃತ ಲೋಕೇಶ್‌ ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

- Advertisement -

ಉಪ್ಪಿನಂಗಡಿ ಪೊಲೀಸರು ದಾಖಲಿಸಿಕೊಂಡಿದ್ದ ನಾಪತ್ತೆ ಪ್ರಕರಣವನ್ನು ಅಸ್ವಾಭಾವಿಕ ಸಾವು ಪ್ರಕರಣವಾಗಿ ಪರಿವರ್ತಿಸಿ ಕೊಂಡಿದ್ದಾರೆ.

Join Whatsapp