ಎ‌ಸ್.ಡಿ.ಪಿ.ಐ ಬೆಂಬಲದೊಂದಿಗೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ

Prasthutha|

ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ಲಲಿತ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ವಿದ್ಯಾಲಕ್ಷ್ಮಿ ಪ್ರಭುರವರು ಆಯ್ಕೆಯಾಗಿದ್ದಾರೆ.

- Advertisement -

ಈ ಮೊದಲು ಬಿಜೆಪಿ ಎರಡುವರೆ ವರ್ಷ ಅಧಿಕಾರದಲ್ಲಿತ್ತು. ಈ ಸಲ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ರಣತಂತ್ರ ಯಶಸ್ವಿಯಾಯಿತು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ ಉಪ್ಪಿನಂಗಡಿ ಪೇಟೆಯಲ್ಲಿ ವಿಜಯೋತ್ಸವ ನಡೀತು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್ ಮಠ, ತೌಸೀಫ್ ಯು ಟಿ, ಇಬ್ರಾಹಿಂ ಯು ಕೆ, ವಿದ್ಯಾ ಲಕ್ಷ್ಮಿ ಪ್ರಭು, ಶ್ರೀಮತಿ ಲಲಿತಾ, ವಿನಾಯಕ ಪೈ, ಅಬ್ದುಲ್ ರಶೀದ್ ಮಠ, ಮೈಸೀದಿ ಪೆರಿಯಡ್ಕ, ಸೌಧ ಕೆರೆಮೂಲೆ, ನೆಬೀಸಾ ಮಠ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ  ಉಮಾನಾಥ್ ಶೆಟ್ಟಿ ಪೆರ್ನೆ, ಮುರಳೀಧರ  ರೈ ಕೋಡಿಂಬಾಡಿ, ಪ್ರವೀಣ್ ಚಂದ್ರ ಆಳ್ವಾ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಶಬೀರ್ ಕೆಂಪಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಪಧಾಧಿಕಾರಿಗಳಾದ ಶ್ರೀ ಸುಶಾಂತ್, ಎಸ್’ಡಿಪಿಐ ಮುಖಂಡರಾದ ಝಕರಿಯಾ ಕೊಡಿಪ್ಪಾಡಿ, ಮುಸ್ತಫಾ ಲತೀಫೀ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಅಝೀಝ್ ಬಸ್ತಿಕ್ಕಾರ್, ಉಮರ್ ಕೊಳ್ಳೇಜಾಲ್, ನಝೀರ್ ಮಠ, ರಿಯಾಝ್ ಇಂಡಿಯನ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.



Join Whatsapp