ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಮೃತ್ಯು

Prasthutha|

ಉಪ್ಪಿನಂಗಡಿ: ಕೆಂಪಿಮಜಲು ನೇತ್ರಾವತಿ ನದಿಯ ಸನ್ಯಾಸಿ ಕಯ ಎಂಬಲ್ಲಿ ಸಂಬಂಧಿಕನ ಜೊತೆ ಮೀನು ಹಿಡಿಯಲು ತೆರಳಿದ್ದ ಪಿಯುಸಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.

- Advertisement -

ಮೃತಪಟ್ಟ ವಿದ್ಯಾರ್ಥಿಯನ್ನು ಬಜತ್ತೂರು ನಿವಾಸಿ ಓಡಿಯಪ್ಪ ಮತ್ತು ಗೋಪಿ ಎಂಬವರ ಪುತ್ರ ರೂಪೇಶ್ (17) ಎಂದು ಗುರುತಿಸಲಾಗಿದೆ.

ರೂಪೇಶ್ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.

- Advertisement -

ಕಟ್ಟೆಚ್ಚಾರ್ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ರೂಪೇಶ್, ಅಲ್ಲಿಂದ ಭಾನುವಾರ ಸಂಬಂಧಿಕ ಅಖಿಲೇಶ್ ಎಂಬಾತನೊಂದಿಗೆ ನೇತ್ರಾವತಿ ನದಿಯ ಸನ್ಯಾಸಿ ಕಯದಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ಎಂದು ತಿಳಿದುಬಂದಿದೆ. ಈ ವೇಳೆ ರೂಪೇಶ್ ನೀರಿನಲ್ಲಿ ಮುಳುಗಿದ್ದು, ಜೊತೆಗಿದ್ದ ಅಖಿಲೇಶ್ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ರೂಪೇಶ್ ಬದುಕುಳಿಯಲಿಲ್ಲ.

ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp