ಉಪ್ಪಿನಂಗಡಿ: ಬಾವಿಗೆ ಬಿದ್ದ ಹಿಂದೂ ವ್ಯಕ್ತಿಯ ಮೃತದೇಹವನ್ನು ಮೇಲೆತ್ತಿದ ಮುಸ್ಲಿಮ್ ಯುವಕರು

Prasthutha|

ಪೆರ್ನೆ: ಬಾವಿಗೆ ಬಿದ್ದ ಹಿಂದೂ ವ್ಯಕ್ತಿಯ ಮೃತ ಶರೀರವನ್ನು ಮುಸ್ಲಿಂ ಯುವಕರು ಮೇಲಕ್ಕೆ ಎತ್ತಿ ಕುಟುಂಬಕ್ಕೆ ಹಸ್ತಾಂತರಿಸಿದ ಘಟನೆ ಸೋಮವಾರ ಉಪ್ಪಿನಂಗಡಿಯ ಪೆರ್ನೆ ಶಾಲೆಯ ಬಳಿ ನಡೆದಿದೆ.

- Advertisement -

ಮೃತ ವ್ಯಕ್ತಿಯನ್ನು 29 ವರ್ಷದ  ಶ್ರೀನಿವಾಸ್  ಎಂದು ಗುರುತಿಸಲಾಗಿದ್ದು, ಇವರು ಕೃಷಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದರು.


ಶ್ರೀನಿವಾಸ್ ಮೃತದೇಹನ್ನು ಅಬ್ದುಲ್ ರಹಿಮಾನ್ ಅಡೆಕ್ಕಲ್ ಮತ್ತು ಆಶಿಫ್ ಕೊಯಿಲ ಮೇಲಕ್ಕೆ ಎತ್ತಿ ಮಾನವೀಯತೆ ಮೆರೆದ ಯುವಕರಾಗಿದ್ದಾರೆ.

- Advertisement -


ಶ್ರೀನಿವಾಸ್ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಈ ವಿಷಯ ತಿಳಿದ ಸ್ಥಳೀಯ ಯುವಕರು ತಾವೇ ಮೃತ ಶರೀರವನ್ನು ಮೇಲಕ್ಕೆ ತಂದು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.


ಯುವಕರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Join Whatsapp