ನಟ ಉಪೇಂದ್ರರನ್ನು ಸಿನಿಮಾ ರಂಗದಿಂದ 5 ವರ್ಷ ಬ್ಯಾನ್ ಮಾಡಿ: ಫಿಲ್ಮ್ ಚೇಂಬರ್ ಗೆ ಮನವಿ

Prasthutha|

ಬೆಂಗಳೂರು: ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ನಟ ಉಪೇಂದ್ರ ಅವರನ್ನು ಸಿನಿಮಾ ರಂಗದಿಂದ 5 ವರ್ಷ ಬ್ಯಾನ್ ಮಾಡಬೇಕು ಎಂದು ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

- Advertisement -


ಭೈರಪ್ಪ ಹರೀಶ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ಕಾರ್ಯಕರ್ತರು ಉಪೇಂದ್ರ ಅವರನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಭೈರಪ್ಪ ಹರೀಶ್ ಕುಮಾರ್, ‘ದಲಿತಕೇರಿ, ಊರಲ್ಲಿ ಯಾರು ಯಾರು ಇರಬೇಕು ಅಂತಾ ಹೇಳಬೇಕು. ಇವರೆಲ್ಲ ಸಿನಿಮಾಗಳಲ್ಲಿ ಮಾತ್ರ ನಾಯಕರು. ನಿಜವಾದ ನಾಯಕ ಓಡಿ ಹೋಗೋದಲ್ಲ. ಸ್ಟೇ ತರೋದು, ಓಡಿ ಹೋಗೋದಲ್ಲ. ಜಾತಿ, ಕೇರಿಗಳ ಬಗ್ಗೆ ಮಾತನಾಡುವವರನ್ನು ಬ್ಯಾನ್ ಮಾಡಬೇಕು’ ಎಂದು ಮಾತನಾಡಿದರು.



Join Whatsapp