ಬೆಂಗರೆ ಸಾಗರ ಮಾಲಾ ಯೋಜನೆಯ ಸ್ಥಳ ಪರಿಶೀಲನೆ ಗೆ ದ.ಕ ಜಿಲ್ಲಾಧಿಕಾರಿ ಭೇಟಿ

Prasthutha|

ಬೆಂಗರೆ: ಮಂಗಳೂರು ಮಹಾನಗರ ಪಾಲಿಕೆ ಗೆ ಒಳಪಡುವ ಬೆಂಗರೆ 60ನೇ ವಾರ್ಡ್ ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಗರ ಮಾಲಾ ಯೋಜನೆಯ ಕಾಮಗಾರಿ ನಡೆಯುವ ಪ್ರದೇಶಕ್ಕೆ ದ.ಕ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ರವರು ಸ್ಥಳ ಪರಿಶೀಲನೆ ಮಾಡಿ ಸ್ಥಳೀಯ ಸಾಂಪ್ರದಾಯಿಕ ದೋಣಿಗಳ ಮತ್ತು ಶಾಲಾ ವಠಾರ ಹಾಗೂ ಯೋಜನೆಯಿಂದ ಮನೆ ಕಳಕೊಳ್ಳುವ ಪ್ರದೇಶಕ್ಕೆ ಭೇಟಿ ನೀಡಿ ಬೆಂಗರೆ ಫೇರಿ ಬೋಟು ಮೂಲಕ ನದಿ ಅಳಿವೆ ಬಾಗಿಲು ವೀಕ್ಷಣೆ ಮಾಡಲು ಸಂಚರಿಸುವ ಸಂದರ್ಭದಲ್ಲಿ ಕಾರ್ಪೊರೇಟರ್ ಮುನೀಬ್ ಬೆಂಗರೆ ಜಿಲ್ಲಾಧಿಕಾರಿ ಯವರಿಗೆ ಮನವಿಯನ್ನು ನೀಡಿ ಸಾರ್ವಜನಿಕ ವಾಗಿ ಜಿಲ್ಲಾಡಳಿತ ಯೋಜನೆಯ ಬಗ್ಗೆ ಯಾವುದೇ ಸಭೆಯನ್ನು ನಡೆಸಲು ಮುಂದಾಗಿದೆ ಇರುವುದನ್ನು ಖೇದ ವ್ಯಕ್ತಪಡಿಸಿದರು..

- Advertisement -

ಅದೇ ರೀತಿ ಸ್ಥಳೀಯ ವಾಗಿ ನಾಡ ದೋಣಿ ಮೀನುಗಾರಿಕೆ ಮನೆಯನ್ನು ಕಳೆದು ಕೊಳ್ಳುವವರಿಗೆ ಸೋಕ್ತವಾದ ಬದಲಿ ವ್ಯವಸ್ಥೆ ಮತ್ತು ಸಾಗರ ಮಾಲಾ ಯೋಜನೆಯ ಕಾಮಗಾರಿ ನಡೆಸುವ ಬಲಬದಿಯಲ್ಲಿ ಬಂದರು ಇಲಾಖೆಯ ಜಮೀನು ಇರುವುದರಿಂದ ಯೋಜನೆಯನ್ನು ಬಳಬದಿಗೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು..

ಅದೇ ರೀತಿ ಯೋಜನೆ ನಡೆಯುವ ಪ್ರದೇಶದಲ್ಲಿ ಸರ್ಕಾರಿ ಪ್ರೌಢಶಾಲಾ ಇರುವುದರಿಂದ ಭೂಮಿ ಗೆ ಸೂಕ್ತವಾದ ದಾಖಲೆ ಮತ್ತು ಆವರಣ ಗೋಡೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿ ಕೊಡಬೇಕು ಮತ್ತು ಹಕ್ಕು ಪತ್ರ ಸರ್ವೆ ಕಾರ್ಯ ಸ್ಥಗಿತ ಗೊಳಿಸಲಾಗಿದೆ ಅದನ್ನು ಪುನರ್ ಆರಂಭ ಮಾಡಬೇಕು ಪೂರಕವಾದ ದಾಖಲೆಯನ್ನು ನೀಡಬೇಕು ಎಂದು ಮನವಿಯನ್ನು ಮಾಡಿದ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಗಳು ಅಧಿಕಾರಿಗಳಿಗೆ ಶಾಲೆಯ ಆರ್.ಟಿ.ಸಿ ಮತ್ತು ಆವರಣ ಗೋಡೆಯನ್ನು ಕೂಡಲೇ ವ್ಯವಸ್ಥಿತ ರೀತಿಯಲ್ಲಿ ಮಾಡಿಸಿ ಕೊಡಬೇಕು ಮತ್ತು ಸರ್ವೆ ಕಾರ್ಯವನ್ನು ಆರಂಭಿಸಬೇಕು ಎಂದು ಆದೇಶವನ್ನು ನೀಡಿದರು…

- Advertisement -

ಈ ಸಂಧರ್ಭದಲ್ಲಿ ಕಂದಾಯ ಅಧಿಕಾರಿಗಳು, ಬಂದರು ಇಲಾಖಾಧಿಕಾರಿ ಗಳು , ವಿವಿದ ಇಲಾಖೆಯ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಉಪಸ್ಥಿತಿ ಇದ್ದರು..

ಜಮಾಅತ್ ಉಪಾಧ್ಯಕ್ಷರಾದ ಸುಲೈಮಾನ್ ಹಾಜಿ, ಎಸ್.ಡಿ.ಪಿ.ಐ ಬೆಂಗರೆ ವಾರ್ಡ್ ಅಧ್ಯಕ್ಷರಾದ ಅಶ್ರಫ್ ಎಸಿ,ಎಚ್, ಕಾರ್ಯದರ್ಶಿ ಶಾದಾಬ್, ಜೊತೆ ಕಾರ್ಯದರ್ಶಿ ನೌಫಾಲ್ , ಮುಖಂಡರಾದ ಸಿದ್ದೀಕ್, ಕಬೀರ್, ಸಲೀಂ, ಆಸೀಫ್ ಮತ್ತು ಜಮಾಅತ್ ಮುಖಂಡರು ಹಾಗೂ ಮೀನುಗಾರಿಕೆ ಸಂಘದ ಗೌರವ ಅದ್ಯಕ್ಷರಾದ ಮುನೀರ್ ಕಾಟಿಪಳ್ಳ , ತಯ್ಯೂಬ್, ಸ್ಥಳೀಯ ನಾಡ ದೋಣಿಯ ಮೀನುಗಾರ ರಾದ ಸಾದಿಕ್, ರಿಯಾಝ್, ಸಾಹುಲ್ , ಹಾಗೂ ಇತರರು ಉಪಸ್ಥಿತಿ ಇದ್ದರು…

Join Whatsapp