ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿದ ಶಿಕ್ಷಕಿ ಸಸ್ಪೆಂಡ್: ವೀಡಿಯೋ ವೈರಲ್

Prasthutha|

ಲಖನೌ: ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿದ ವೀಡಿಯೋ ವೈರಲ್ ಆಗಿದ್ದು, ಇದು ಪೋಷಕರ ಆಕ್ರೋಶಕ್ಕೆ ಗುರಿಯಾಗಿದೆ.

- Advertisement -

ವಿದ್ಯಾರ್ಥಿಯ ಕೈಯಲ್ಲಿ ಶಿಕ್ಷಕಿ ಮಸಾಜ್ ಮಾಡಿಸುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸದ್ಯ ತಪ್ಪಿತಸ್ಥ ಶಿಕ್ಷಕಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

- Advertisement -

ಹರ್ದೋಯಿಯ ಪೋಖಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಊರ್ಮಿಳಾ ಸಿಂಗ್ ಅವರು ಕುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಮಸಾಜ್ ಮಾಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

https://twitter.com/GradingNews/status/1552286155755835394
Join Whatsapp