ಲಕ್ನೋ: ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಅವರು ಬಾಬು ಸಿಂಗ್ ಕುಶ್ವಾಹಾ ಮತ್ತು ಬಹುಜನ ಮುಕ್ತಿ ಪಾರ್ಟಿದೊಂದಿಗೆ ಮೈತ್ರಿ ಮಾಡಿರುವುದಾಗಿ ಶನಿವಾರ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉವೈಸಿ, ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ಒಬ್ಬರು ಮತ್ತು ದಲಿತ ಸಮುದಾಯ ಒಬ್ಬರು ಮುಖ್ಯಮಂತ್ರಿಗಳಾಗಲಿದ್ದಾರೆ. ಮುಸ್ಲಿಮ್ ಸಮುದಾಯ ಸೇರಿದಂತೆ 3 ಉಪ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ಅವರು ತಿಳಿಸಿದರು.
ದೀರ್ಘಕಾಲದ ಮಾತುಕತೆಯ ಬಳಿಕ ಈ ಮೈತ್ರಿ ಏರ್ಪಟ್ಟಿದೆ ಹೊರತು ಬಲವಂತದ ಮೈತ್ರಿ ಅಲ್ಲ. ಈ ಹಿಂದಿನಿಂದಲೂ ನಾವು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಕಾರ್ಯ ನಿರ್ವಹಿಸಿದ್ದೇವೆ ಎಂದು ಬಾಬು ಸಿಂಗ್ ಕುಶ್ವಾಹಾ ತಿಳಿಸಿದರು.