ಯುಪಿಗೆ ಯೋಗ್ಯ ಸರ್ಕಾರದ ಅಗತ್ಯವಿದೆ-ಯೋಗಿ ಸರ್ಕಾರವಲ್ಲ: ಅಖಿಲೇಶ್

Prasthutha|

ಲಖ್ನೋ: ಕನಿಷ್ಠ ಮೊಬೈಲ್ ಫೋನ್, ಲ್ಯಾಪ್’ಟಾಪ್ ಬಳಸಲು ಬಾರದ ಒಬ್ಬ ವ್ಯಕ್ತಿ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಸ್ಥಾನದಲ್ಲಿದ್ದಾರೆ. ಉತ್ತರಪ್ರದೇಶಕ್ಕೆ ಯೋಗ್ಯ ಸರ್ಕಾರದ ಅಗತ್ಯವಿದೆ, ಯೋಗಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ಮಾಜಿ ಸಿಎಂ , ಸಮಾಜವಾದಿ ಪಾರ್ಟಿಯ ಮುಖಂಡ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

- Advertisement -

ಭಾರತೀಯ ಜನತಾ ಪಕ್ಷವು ಉತ್ತರಪ್ರದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ ಎಂದು ಅಖೀಲೇಶ್ ಯಾದವ್ ಆರೋಪಿಸಿದ್ದಾರೆ. ಯೋಗಿ ಅದಿತ್ಯನಾಥ್’ಅವರಿಗೆ ಲ್ಯಾಪ್ಟಾಪ್ ಬಳಸಲು ಬರುವುದಿಲ್ಲ. ನನಗೆ ತಿಳಿದ ಪ್ರಕಾರ ಅವರಿಗೆ ಕನಿಷ್ಠ ಮೊಬೈಲ್ ಫೋನ್ ಕೂಡ ಹೇಗೆ ಉಪಯೋಗಿಸಬೇಕೆಂದು ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ವಿರುದ್ಧ ಮಾತನಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅಝಮ್’ಘರ್’ನಲ್ಲಿ ವ್ಯಾಪಾರಿಯೊಬ್ಬರನ್ನು ಹತ್ಯೆಮಾಡಲಾಗಿದೆ. ಸಿಎಂ ವಿರುದ್ಧ ದಾಖಲಾಗಿದ್ದ ಕೇಸುಗಳನ್ನು ಈಗ ಹಿಂಪಡೆಯಲಾಗಿದೆ ಎಂದು ಅಖಿಲೇಶ್ ANI ಸುದ್ದಿ ಸಂಸ್ಥೆಯ ಜೊತೆ ಮಾತನಾಡುವ ವೇಳೆ ಹೇಳಿದ್ದಾರೆ.

- Advertisement -

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್’ನಲ್ಲಿ ಚುನಾವಣೆ ನಡೆಯಲಿದ್ದು, BJP ಹಾಗೂ SP ನಾಯಕರ ಆರೋಪ-ಪ್ರತ್ಯಾರೋಪದ ಭರಾಟೆ ಈಗಾಗಲೇ ಜೋರಾಗಿದೆ.

Join Whatsapp