ಉತ್ತರ ಪ್ರದೇಶ । ಅತ್ಯಾಚಾರಕ್ಕೆ ಕರೆ ನೀಡಿದ ಬಜರಂಗ ಮುನಿ; ಮುಸ್ಲಿಮ್ ಮಹಿಳೆಯರ ಪ್ರತಿಭಟನೆ

Prasthutha|

ಲಕ್ನೋ: ಅತ್ಯಾಚಾರಕ್ಕೆ ಕರೆ ನೀಡಿದ್ದ ಧಾರ್ಮಿಕ ಮುಖಂಡ ಬಜರಂಗ ಮುನಿಯ ವಿರುದ್ಧ ಮುಸ್ಲಿಮ್ ಮಹಿಳೆಯರು ಉತ್ತರ ಪ್ರದೇಶದ ಖೈರಾಬಾದ್ ಎಂಬಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

‘ಬಾಬಾ ಕಿ ಗೂಂಡಾಗಿರಿ ನಹೀ ಚಲೇಗಿ’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ತಲೆಮರೆಸಿಕೊಂಡ ಬಜರಂಗ ಮುನಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

- Advertisement -

ಏಪ್ರಿಲ್ 2 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಸೀತಾಪುರ ಜಿಲ್ಲೆಯ ಖೈರಾಬಾದ್ ನಗರದ ಮಹರ್ಷಿ ಲಕ್ಷ್ಮಣ ದಾಸ್ ಉದಾಸಿನ್ ಆಶ್ರಮದ ಸ್ವಾಮಿ, ಬಜರಂಗ ಮುನಿ ಎಂಬಾತ ಮುಸ್ಲಿಮ್ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಕರೆ ನೀಡಿದ್ದನು.

ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಕಾರ್ಯಕರ್ತರು ಏಪ್ರಿಲ್ 9 ರಂದು ನವದೆಹಲಿಯ ಉತ್ತರ ಪ್ರದೇಶ ಭವನದ ಹೊರಗೆ ಜಂಟಿ ಪ್ರತಿಭಟನೆ ನಡೆಸಿದ್ದರು.

Join Whatsapp