ಡಾ. ಕಫೀಲ್ ಖಾನ್ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ | ಯೋಗಿ ಆದಿತ್ಯನಾಥ್ ಸರಕಾರಕ್ಕೆ ದೊಡ್ಡ ಮುಖಭಂಗ

Prasthutha|

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಾತನಾಡಿದ್ದುದಕ್ಕಾಗಿ ಭಯೋತ್ಪಾದನೆ ತಡೆಗಾಗಿರುವ ಕಠಿಣ ಕಾನೂನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವೈದ್ಯ ಡಾ. ಕಫೀಲ್ ಖಾನ್ ಶಿಕ್ಷೆಗೆ ಗುರಿಪಡಿಸಲು ಯತ್ನಿಸಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರಕ್ಕೆ ದೊಡ್ಡ ಮುಖಭಂಗವಾಗಿದೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನವಾಗಿದ್ದ ಡಾ. ಕಫೀಲ್ ಖಾನ್ ಅವರನ್ನು ಬಿಡುಗಡೆಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೊರ್ಟ್ ನಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಪ್ರಶ್ನಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.

- Advertisement -

ಕ್ರಿಮಿನಲ್ ಪ್ರಕರಣಗಳು ಅದರದೇ ಆದ ಕ್ರಮಗಳಿಂದ ನಿರ್ಧರಿಸಲಾಗುತ್ತದೆ. ಅಲಹಾಬಾದ್ ಹೈಕೋರ್ಟ್ ಸೆ.1ರಂದು ನೀಡಿದ ತೀರ್ಪಿನಲ್ಲಿ ಮಾಡಿದ ಅವಲೋಕನಗಳು ಖಾನ್ ವಿರುದ್ಧದ ಅಪರಾಧ ಪ್ರಕರಣಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಿಜೆಐ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ತಿಳಿಸಿದೆ.

ಹೈಕೋರ್ಟ್ ನ ದೇಶ ಉತ್ತಮವಾದುದು ಎಂದು ತೋರುತ್ತಿದೆ. ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಕಾರಣಗಳಿಲ್ಲ. ಇನ್ನೊಂದು ಪ್ರಕರಣದಲ್ಲಿ ನೀವು ಕಫೀಲ್ ಖಾನ್ ವಿರುದ್ಧ ಬಂಧನಾದೇಶ ಬಳಸಲಾಗುವುದಿಲ್ಲ ದು ಕೋರ್ಟ್ ಸ್ಪಷ್ಟಪಡಿಸಿದ್ದಾರೆ.

2019ರ ಅಂತ್ಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಜಾರಿ ತರಲುದ್ದೇಶಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ತೀವ್ರವಾಗಿತ್ತು. ಈ ವೇಳೆ ಡಾ. ಕಫೀಲ್ ಖಾನ್ ಅವರು ಡಿ.13ರಂದು ಅಲಿಗಢ್ ಮುಸ್ಲಿಂ ವಿವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಎನ್ ಎಸ್ ಎಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿತ್ತು.

ಆದರೆ, ಡಾ. ಕಫೀಲ್ ಖಾನ್ ಅವರ ಭಾಷಣ ಹಿಂಸೆಯನ್ನು ಪ್ರಚೋದಿಸುವಂತಿರಲಿಲ್ಲ. ಅದು ರಾಷ್ಟ್ರೀಯ ಏಕತೆ ಮತ್ತು ಜನರ ನಡುವೆ ಭಾವೈಕ್ಯತೆಯನ್ನು ಸಾರಲು ಕರೆ ಕೊಡುವಂರುತಿತ್ತು ಎಂದು ಹೈಕೋರ್ಟ್ ಹೇಳಿ, ಜಾಮೀನು ಜಾರಿಗೊಳಿಸಿತ್ತು.

- Advertisement -