ಬುಲ್ಡೋಜರ್ ಕಾರ್ಯಾಚರಣೆ ಸಕ್ರಮ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದ ಯುಪಿ ಸರ್ಕಾರ

Prasthutha|

ನವದೆಹಲಿ: ಇತ್ತೀಚೆಗೆ ಭಾರೀ ಟೀಕೆಗೆ ಗುರಿಯಾಗಿದ್ದ ಕಾನ್ಪುರ ಮತ್ತು ಪ್ರಯಾಗ್ ರಾಜ್ ಗಳಲ್ಲಿ ಮುಸ್ಲಿಮರ ಹಲವು ಮನೆಗಳನ್ನು ಉರುಳಿಸಿದ್ದನ್ನು ಉತ್ತರ ಪ್ರದೇಶ ಸರಕಾರ ಸಮರ್ಥಿಸಿಕೊಂಡಿದೆ. ಕಾನ್ಪುರ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರಗಳು 1972ರ ಉತ್ತರ ಪ್ರದೇಶ ನಗರ ಯೋಜನೆ ಮತ್ತು ಅಭಿವೃದ್ಧಿ ಕಾಯ್ದೆಯಡಿ ಈ ಕಾರ್ಯಾಚರಣೆ ಕೈಗೊಂಡಿದೆ ಎಂದು ಆದಿತ್ಯನಾಥ್ ಸರ್ಕಾರ ಹೇಳಿದೆ.

- Advertisement -


ಜಮೀಯತ್ ಉಲಮಾ ಹಿಂದ್ ಸಂಘಟನೆಯು ಈ ಮನೆ ಧ್ವಂಸಗೊಳಿಸುವ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಇದೆಲ್ಲ ಮಾಧ್ಯಮಗಳ ವರದಿ ಆದರಿಸಿದೆ. ರಾಜ್ಯ ಸರಕಾರದ ಮೇಲೂ ಅಂತಹ ಆರೋಪ ಮಾಡುತ್ತಿದ್ದು ಅದರಲ್ಲಿ ಸತ್ಯಾಂಶವಿಲ್ಲ ಎಂದು ಸರಕಾರ ಹೇಳಿದೆ. ಇವೆಲ್ಲ ತಪ್ಪಭಿಪ್ರಾಯ ಹೊಂದಿದ್ದು, ಆ ಬುಲ್ಡೋಜಿಂಗ್ ಕಾರ್ಯವನ್ನು ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳು ಕೈಗೊಂಡಿವೆ. ಅವು ಸ್ವಾಯುತ್ತ ಸಂಸ್ಥೆಗಳಾಗಿದ್ದು, ಸರಕಾರದ ಕಾನೂನಿನಂತೆ ಕಾರ್ಯ ನಿರ್ವಹಿಸುತ್ತವೆ. ಸದರಿ ಪ್ರಾಧಿಕಾರಿಗಳು ರಾಜ್ಯ ಸರಕಾರದ 1972ರ ಕಾಯ್ದೆಯಂತೆ ಆಗಾಗ ಇಂಥ ಅಕ್ರಮ ಮನೆ ತೆರವುಗೊಳಿಸುವ ಕರ್ತವ್ಯಗಳನ್ನು ನಿರ್ವಹಿಸುತ್ತವೆ. ಕಾನ್ಪುರದ ವಿಷಯದಲ್ಲಿ ಕಟ್ಟಡ ನಿರ್ಮಾಣ ನಿಯಮ ಪಾಲನೆಯಾಗಿಲ್ಲ ಎಂದು ಕಾಂಪೌಂಡ್ ನಿರ್ಮಾಣಕ್ಕೆ ಹಾಕಿದ ಅರ್ಜಿಯಲ್ಲಿ ಒಪ್ಪಿಕೊಂಡಿದ್ದಾರೆ.


ಆದರೆ ಈ ಬುಲ್ಡೋಜಿಂಗ್ ಕೆಲಸವು ಗಲಭೆಯಲ್ಲಿ ಆರೋಪ ಹೊತ್ತವರ ಮೇಲೆ ಕೂಡಲೆ ಹೇರಲಾಗಿದೆ ಹೊರತು ಇತರರ ಮೇಲಲ್ಲ ಎಂಬುದನ್ನು ಜಮಾತ್ ಒತ್ತಿ ಹೇಳಿದೆ. ಆದರೆ ಉತ್ತರ ಪ್ರದೇಶ ಸರಕಾರವು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಅದನ್ನು ಅಲ್ಲಗಳೆಯಲಾಗಿದೆ. ಕಾನೂನು ಬದ್ಧ ಸರಕಾರ ಮತ್ತು ಕಾನೂನುಬದ್ಧ ಪ್ರಾಧಿಕಾರಗಳು ಮತ್ತು ಕಾನೂನುಬದ್ಧ ಕಾರ್ಯಾಚರಣೆಗಳ ಮೇಲೆ ಕಳಂಕ ತರುವ ಕೆಲಸವಿದು. ಧಾರ್ಮಿಕ ಬಣ್ಣ ಹಚ್ಚಿ ಕಾನೂನಾತ್ಮಕ ಕಾರ್ಯಾಚರಣೆಯನ್ನು ಟೀಕಿಸಿದರೆ ಅದು ಇನ್ನಷ್ಟು ಶಿಕ್ಷಾರ್ಹ ಅಪರಾಧವಾಗುತ್ತದೆ. ಆ ಆರೋಪಗಳೆಲ್ಲ ಅಪ್ಪಟ ಸುಳ್ಳು, ಅವನ್ನು ನಿರಾಕರಿಸುವುದಾಗಿ ಉತ್ತರ ಪ್ರದೇಶ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ ಅಫಿಡವಿಟ್ ನಲ್ಲಿ ಹೇಳಿದೆ.

- Advertisement -


ಕೋರ್ಟಿಗೆ ತಪ್ಪು ಹೇಳಿದ್ದಕ್ಕೆ ಅರ್ಜಿದಾರರನ್ನು ಹೊಣೆ ಮಾಡಬೇಕು ಮತ್ತು ಆ ಅರ್ಜಿಯನ್ನು ವಜಾ ಮಾಡಬೇಕು ಎಂದು ಉತ್ತರ ಪ್ರದೇಶ ಸರಕಾರ ಹೇಳಿದೆ. ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ಸರಕಾರವು ಬೇರೆ ಕಾಯ್ದೆಗಳ ಮೂಲಕ ಕ್ರಮ ತೆಗೆದುಕೊಳ್ಳುತ್ತಿದೆ. ಸಿಆರ್ ಪಿಸಿ, ಐಪಿಸಿ, ಉತ್ತರ ಪ್ರದೇಶದ 1986ರ ಗ್ಯಾಂಗ್ ಸ್ಟರ್ ಮತ್ತು ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಕಾಯ್ದೆ, 2020ರ ಉತ್ತರ ಪ್ರದೇಶ ಸರಕಾರದ ಸಾರ್ವಜನಿಕ ಮತ್ತು ಖಾಸಗಿ ಸ್ವತ್ತುಗಳಿಗೆ ಹಾನಿ ಮಾಡಿದವರಿಂದ ಹಾನಿಯ ಮೌಲ್ಯ ವಸೂಲಿ ಇವೆಲ್ಲ ಕಾಯ್ದೆಗಳು ಗಲಭೆಕೋರರ ವಿರುದ್ಧ ಬಳಕೆಯಾಗುತ್ತವೆ ಎಂದು ಉ. ಪ್ರ. ಸರಕಾರ ಹೇಳಿದೆ.


ಕಾನ್ಪುರದ ಇಸ್ತಿಯಾಕ್ ಅಹ್ಮದ್ ಪ್ರಕರಣ ಮುಂದಿನಂತಿದೆ; ಇವರ ವಸತಿ ಪ್ರದೇಶದ ಮನೆಯಲ್ಲಿ ನಿಯಮಬಾಹಿರವಾಗಿ ತಳಮಹಡಿ ಹಾಗೂ ಮೊದಲ ಮತ್ತು ಎರಡನೆಯ ಮಹಡಿಗಳಲ್ಲಿ 130 ಚದರ ಮೀಟರ್ ಕಮರ್ಶಿಯಲ್ ಕಟ್ಟಡ ನಿರ್ಮಾಣ ನಡೆದಿತ್ತು. ಅದು 2016ರ ಜುಲೈ 6ರ ಪ್ಲಾನಿಗೆ ಅತೀತವಾದುದಾಗಿತ್ತು ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ. ಇಸ್ತಿಯಾಕ್ ಅಹ್ಮದ್ ರಿಗೆ ಈ ಬಗ್ಗೆ 2020ರ ಆಗಸ್ಟ್ 28ರಂದು ನೋಟೀಸ್ ನೀಡಲಾಗಿತ್ತು. ಹಲವು ನೋಟೀಸುಗಳನ್ನು ನೀಡಿದರೂ ಅವರಾಗಲಿ, ಅವರ ಪರವಾಗಿ ಬೇರೆಯವರಾಗಲಿ ವಿಚಾರಣೆಗೆ ಹಾಜರಾಗಲಿಲ್ಲ. ಆ ಕಟ್ಟಡ ಸೀಲ್ ಮಾಡಲಾಯಿತು; ಅದನ್ನು ಅವರು ಒಡೆದುದರಿಂದ ಆ ಸಂಬಂಧ ಅವರ ಮೇಲೆ ಎಫ್ ಐಆರ್ ದಾಖಲಾಗಿದೆ.


ಕಟ್ಟಡ ಪರವಾನಗಿಯನ್ನು ಎರಡು ಮಹಡಿ ವಾಸದ ಮನೆಗೆ ಪಡೆಯಲಾಗಿತ್ತು. ಆದರೆ ತಳ ಮಹಡಿಯನ್ನೂ ಕಟ್ಟಲಾಗಿತ್ತು, ಮೂರನೆಯ ಮಹಡಿಯನ್ನೂ ಕಟ್ಟಲಾಗಿತ್ತು. ಕೊನೆಗೆ ಕಮರ್ಶಿಯಲ್ ಮಾಡಲಾಗಿತ್ತು. ಅಲ್ಲದೆ ಪಕ್ಕದ ರಸ್ತೆಗೆ ಅಡ್ಡವಾಗುವಂತೆಯೂ ಕಟ್ಟಲಾಗಿತ್ತು. ಆದ್ದರಿಂದ 2022ರ ಏಪ್ರಿಲ್ 19ರಂದು ಡೆಮಾಲಿಶನ್ ನೋಟೀಸನ್ನು 15 ದಿನದ ಅವಧಿ ನೀಡಿ ಕೊಡಲಾಗಿತ್ತು. ಅಕ್ರಮ ಕಟ್ಟಡವಾದ್ದರಿಂದ ಕೆಡವಲಾಯಿತು ಎಂದು ಸುಪ್ರೀಂ ಕೋರ್ಟಿಗೆ ಉತ್ತರ ಪ್ರದೇಶ ಸರಕಾರದ ಪರ ನೀಡಿದ ಅಫಿಡವಿಟ್ ನಲ್ಲಿ ಹೇಳಲಾಗಿದೆ.

Join Whatsapp