ಬಾಲಕಿಗೆ ಹಾವು ಕಡಿತ: ಮಾಂತ್ರಿಕನ ಮಾತು ಕೇಳಿ ಸಗಣಿಯಲ್ಲಿ ಹೂತಿಟ್ಟು ಹುಚ್ಚಾಟ!

Prasthutha|

- Advertisement -

ಬಾಲಕಿ ಮೃತ್ಯು

ಷಹಜಹಾನ್‌ ಪುರ: ಹಾವು ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮಾಂತ್ರಿಕನ ಮಾತು ಕೇಳಿ
ಮೂಢನಂಬಿಕೆಗೆ ಪ್ರಾಣವೊಂದು ಹಾರಿ ಹೋಗಿದೆ.

- Advertisement -

ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಶಹಜಹಾನ್​ ಪುರ ಜಿಲ್ಲೆಯ ರಾವತ್​ ಪುರ ಗ್ರಾಮದಲ್ಲಿ 3 ದಿನಗಳ ಹಿಂದೆ ಘಟನೆ ನಡೆದಿದೆ.

ಬಾಲಕಿಗೆ ಹಾವು ಕಚ್ಚಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಊರ ಮಾಂತ್ರಿಕನ ಬಳಿಗೆ ಕರೆದೊಯ್ದಿದ್ದಾರೆ. ಮಗು ವಿಷದಿಂದ ಸಾವನ್ನಪ್ಪಿದೆ. ಮಾಂತ್ರಿಕ ಬಾಲಕಿ ಬದುಕಿದ್ದಾಳೆ ಎಂದು ಹೇಳಿ ದೇಹವನ್ನು ಸಗಣಿ, ಬೇವಿನ ಸೊಪ್ಪಿನಿಂದ ಮುಚ್ಚಿಸಿದ್ದಾನೆ. ಆದರೂ ಮಗು ಬದುಕಿಲ್ಲ. ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.

Join Whatsapp