ಬಾಲಕಿ ಮೃತ್ಯು
ಷಹಜಹಾನ್ ಪುರ: ಹಾವು ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಮಾಂತ್ರಿಕನ ಮಾತು ಕೇಳಿ
ಮೂಢನಂಬಿಕೆಗೆ ಪ್ರಾಣವೊಂದು ಹಾರಿ ಹೋಗಿದೆ.
ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಶಹಜಹಾನ್ ಪುರ ಜಿಲ್ಲೆಯ ರಾವತ್ ಪುರ ಗ್ರಾಮದಲ್ಲಿ 3 ದಿನಗಳ ಹಿಂದೆ ಘಟನೆ ನಡೆದಿದೆ.
ಬಾಲಕಿಗೆ ಹಾವು ಕಚ್ಚಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಊರ ಮಾಂತ್ರಿಕನ ಬಳಿಗೆ ಕರೆದೊಯ್ದಿದ್ದಾರೆ. ಮಗು ವಿಷದಿಂದ ಸಾವನ್ನಪ್ಪಿದೆ. ಮಾಂತ್ರಿಕ ಬಾಲಕಿ ಬದುಕಿದ್ದಾಳೆ ಎಂದು ಹೇಳಿ ದೇಹವನ್ನು ಸಗಣಿ, ಬೇವಿನ ಸೊಪ್ಪಿನಿಂದ ಮುಚ್ಚಿಸಿದ್ದಾನೆ. ಆದರೂ ಮಗು ಬದುಕಿಲ್ಲ. ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.