ಜ್ಞಾನವಾಪಿ ಮಸೀದಿ ವಿಚಾರವಾಗಿ ಪ್ರತಿಕ್ರಿಯಿಸಿದ ದಲಿತ ಪ್ರಾಧ್ಯಾಪಕರ ವಿರುದ್ಧ ಪ್ರಕರಣ ದಾಖಲು

Prasthutha|

ವಾರಣಾಸಿ: ಕಾಶಿಯ ಜ್ಞಾನವಾಪಿ ಮಸೀದಿ ವಿವಾದದ ಕುರಿತು ಆನ್ ಲೈನ್ ಚರ್ಚೆ ಮಧ್ಯೆ ನೀಡಿದ ಹೇಳಿಕೆಗಾಗಿ ಲಕ್ನೋ ವಿವಿಯ ಹಿಂದಿ ಪ್ರಾಧ್ಯಾಪಕ ರವಿಕಾಂತ್ ಚಂದನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

- Advertisement -

ವಿವಿ ವಿದ್ಯಾರ್ಥಿ, ಎಬಿವಿಪಿ ಕಾರ್ಯಕರ್ತ ಅಮನ್ ದುಬೆ, ದಲಿತ ಪ್ರೊಫೆಸರ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಅರೋಪಿಸಿ ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 153 ಎ, 504, 505 (2) ಮತ್ತು ಐಟಿ ಕಾಯ್ದೆ 66 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಮಧ್ಯೆ ವಿವಿಯ ಕ್ಯಾಂಪಸ್ ನಲ್ಲಿ ಎಬಿವಿಪಿ ಸದಸ್ಯರು ಚಂದನ್ ಅವರನ್ನು ಮಂಗಳವಾರ ಗಂಭೀರವಾಗಿ ಹಲ್ಲೆ ನಡೆಸಿದ್ದರು.

ಆನ್ ಲೈನ್ ನಲ್ಲಿ ನಡೆದ ಚರ್ಚೆಯಲ್ಲಿ ವಾರಣಾಸಿಯ ಕಾಶಿ ವಿಶ್ವನಾಥ್ ದೇವಾಲಯವನ್ನು ಮೊಘಲ್ ಚಕ್ರವರ್ತಿ ಔರಂಗಜೇಬ್ ಏಕೆ ಕೆಡವಿದ್ದಾನೆ ಎಂಬುದರ ಕುರಿತು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕೀಯ ನಾಯಕ ಪಟ್ಟಾಭಿ ಸೀತಾರಾಮಯ್ಯ ಅವರ ಗರಿಗಳು ಮತ್ತು ಕಲ್ಲುಗಳು ಎಂಬ ಪುಸ್ತಕದ ಕಥೆಯನ್ನು ಚಂದನ್ ಉಲ್ಲೇಖಿಸಿದ್ದಾರೆ.

- Advertisement -

ಎಬಿವಿಪಿ ಕಾರ್ಯಕರ್ತ ಲಕ್ನೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಅಮನ್ ದುಬೆ ನೀಡಿದ ದೂರಿನ ಮೇಲೆ ಹಸನ್ ಗಂಜ್ ಪೊಲೀಸ್ ಠಾಣೆಯಲ್ಲಿ ಅಲ್ಲಿನ ಎಸೋಸಿಯೇಟ್ ಪ್ರೊಫೆಸರ್ ರವಿಕಾಂತ್ ಅವರ ಮೇಲೆ ಮೊಕದ್ದಮೆ ದಾಖಲಾಗಿದೆ.

ಕಲಹ ತಂದಿಡುವ ಹೇಳಿಕೆ ನೀಡಿದ್ದಾರೆ ಎಂದು ಎಸೋಸಿಯೇಟ್ ಪ್ರೊಫೆಸರ್ ರವಿಕಾಂತ್ ಅವರ ಮೇಲೆ ಎಫ್ಐಆರ್- ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ವಾರಣಾಸಿಯ ಕಾಸಿ ವಿಶ್ವನಾಥ ದೇಗುಲದ ಬಗೆಗೆ ಪ್ರೊಫೆಸರ್ ಅವರು ಖಂಡನಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಎಬಿವಿಪಿ- ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನವರು ಪ್ರತಿಭಟನೆ ನಡೆಸಿ ರವಿಕಾಂತ್ ಅವರು ಕ್ಷಮಾಪಣೆ ಕೇಳಬೇಕು ಎಂದು ಘೋಷಣೆ ಕೂಗಿದರು.

ರವಿಕಾಂತ್ ಅವರು ಲಕ್ನೋ ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವರು. ಎರಡು ಗುಂಪುಗಳ ನಡುವೆ ವೈರಕ್ಕೆ ಕಾರಣವಾಗುವ, ಸೌಹಾರ್ದ ಕೆಡಿಸುವ ಹೇಳಿಕೆಯನ್ನು ರವಿಕಾಂತ್ ನೀಡಿದ್ದಾರೆ ಎಂದು ಅವರ ಮೇಲೆ ಐಪಿಸಿ ಸೆಕ್ಷನ್ 153ಎ ಅಡಿ ಪ್ರಕರಣ ದಾಖಲಿಸಲಾಗಿದೆ. ಬೇಕೆಂದೇ ಅವಮಾನ, ಶಾಂತಿ ಭಂಗದ ಸೆಕ್ಷನ್ 504, ಸಾರ್ವಜನಿಕವಾಗಿ ಕಿಡಿಗೇಡಿತನದ ಹೇಳಿಕೆ ಎಂದು 505 ಈ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಮಾಹಿತಿ ತಂತ್ರಜ್ಞಾನದ ದುರುಪಯೋಗ ಎಂದೂ ಎಫ್ಐಆರ್ ನಲ್ಲಿ ಹೇಳಲಾಗಿದೆ.

ಈ ಮಧ್ಯೆ ಎಬಿವಿಪಿಯ “ಕ್ಯಾಂಪಸ್ ನೊಳಗಿನ ಗೂಂಡಾಗಿರಿ” ಯನ್ನು ಖಂಡಿಸಿದ ಎಡಪಂಥೀಯ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್ಎ) ಪ್ರಾಧ್ಯಾಪಕರೊಂದಿಗೆ ನಿಲ್ಲುವುದಾಗಿ ತಿಳಿಸಿದೆ.



Join Whatsapp