ಉತ್ತರ ಪ್ರದೇಶ: ಟ್ರಕ್​ ಗೆ ಡಿಕ್ಕಿ ಹೊಡೆದು ಧಗ ಧಗನೆ ಹೊತ್ತಿ ಉರಿದ ಕಾರು, 8 ಮಂದಿ ಮೃತ್ಯು

Prasthutha|

- Advertisement -

ನೈನಿತಾಲ್: ತಡರಾತ್ರಿ ಹೆದ್ದಾರಿಯಲ್ಲಿ ಟ್ರಕ್‌ ಗೆ ಕಾರು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಮಗು ಸೇರಿದಂತೆ ಎಂಟು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾರು ಸೆಂಟರ್ ಲಾಕ್ ಆಗಿದ್ದ ಕಾರಣ ಏಳು ವಯಸ್ಕರು ಮತ್ತು ಮಗುವನ್ನು ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

- Advertisement -

ಅಪಘಾತ ಸ್ಥಳದ ದೃಶ್ಯಾವಳಿಗಳ ಪ್ರಕಾರ, ನೈನಿತಾಲ್ ಹೆದ್ದಾರಿಯಲ್ಲಿ ಟ್ರಕ್ ಪಕ್ಕದಲ್ಲಿ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ. ಅಪಘಾತದ ನಂತರ ಕಾರಿನ ಬಾಗಿಲುಗಳು ಜಾಮ್ ಆಗಿರಬಹುದು, ತೆರೆಯಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಕಾರು ಎದುರಿನ ಲೇನ್‌ಗೆ ತಿರುಗಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಚಂದ್ರ ಭನ್ ಧುಲೆ ತಿಳಿಸಿದ್ದಾರೆ.

Join Whatsapp