ಯುಪಿ: ತಮ್ಮನ ಶವವನ್ನು ತೋಳಲ್ಲಿ ಹೊತ್ತೊಯ್ದ 10 ವರ್ಷದ ಬಾಲಕ: ವೀಡಿಯೋ ವೈರಲ್

Prasthutha|

ಮೀರತ್ : ಮೃತಪಟ್ಟ ತನ್ನ ಎರಡು ವರ್ಷ ಪ್ರಾಯದ ತಮ್ಮನ ಮೃತದೇಹವನ್ನು 10 ವರ್ಷದ ಬಾಲಕನೊಬ್ಬ ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಬಾಲಕ ಸಾಗರ್ ಕುಮಾರ್ ತನ್ನ ತಮ್ಮ ಕಲಾಕುಮಾರ್ ನ ಮೃತದೇಹ ಹೊತ್ತು ಕೊಂಡು ಹೋಗುತ್ತಿದ್ದರೆ, ಆತನ ತಂದೆ ಆತನನ್ನು ಹಿಂಬಾಲಿಸುತ್ತಿರುವುದು ವೀಡಿಯೋದಲ್ಲಿದೆ.

ಮಲತಾಯಿ ಸೀತಾ ಎಂಬಾಕೆ ಮಗು ಕಲಾಕುಮಾರ್ ನನ್ನು ದೆಹಲಿ–ಸಹರಾನ್ ಪುರ ಹೈವೆಗೆ ಎಸೆದಿದ್ದಳು. ರಸ್ತೆಗೆ ಬಿದ್ದ ಮಗುವಿನ ಮೇಲೆ ಕಾರು ಹರಿದು ಮಗು ಮೃತಪಟ್ಟಿತ್ತು ಎನ್ನಲಾಗಿದೆ.

- Advertisement -

ಮಗುವನ್ನು ಕೊಂದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಮಹಿಳೆ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲಿಸರು ಬಂಧಿಸಿದ್ದು, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಶವಪರೀಕ್ಷೆಯ ನಂತರ ಮಗುವನ್ನು ತಂದೆ ಪ್ರವೀಣ್ ಕುಮಾರ್ ಅವರಿಗೆ ಹಸ್ತಾಂತರಿಸಲಾಗಿತ್ತು.

ಆದರೆ ಮೃತದೇಹ ಸಾಗಿಸಲು ವಾಹನ ಒದಗಿಸುವಂತೆ ಆರೋಗ್ಯಾಧಿಕಾರಿಗೆ ಮನವಿ ಮಾಡಿದ್ದರೂ, ಅಧಿಕಾರಿ ಯಾವುದೇ ಪ್ರತಿಕ್ರಿಯೆ ತೋರಿರಲಿಲ್ಲ. ಹೀಗಾಗಿ ಮೃತದೇಹವನ್ನು ಹೊತ್ತುಕೊಂಡೇ ಸಾಗಿದ್ದರು ಎಂದು ಹೇಳಲಾಗಿದೆ.

ಈ ಕುರಿತು ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಗ್ಯಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿಸುದ್ದಾರೆ.

Join Whatsapp