ರಾಜ್ಯದಲ್ಲಿ ಅಕಾಲಿಕ ಮಳೆ; ಅನಾಹುತಗಳಿಗೆ ಮೂವರು ಬಲಿ

Prasthutha|

ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿಉಂಟಾದ ಅಕಾಲಿಕ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದ್ದು, ಕೆಲವು ಕಡೆಗಳಲ್ಲಿ ಸಾವುಗಳು ಸಂಭವಿಸಿವೆ.

- Advertisement -

ಶ್ರೀರಂಗಪಟ್ಟಣದಲ್ಲಿ ಚಲಿಸುತ್ತಿದ್ದ ಬೈಕ್ಗೆಲ ತೆಂಗಿನಮರ ಮುರಿದು ಬಿದ್ದು ಹೆತ್ತವರೊಂದಿಗೆ  ಬೈಕಿನಲ್ಲಿ ಹೋಗುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಮಳೆ ಬಂದ ಕಾರಣ ಮರದಡಿಯಲ್ಲಿ ನಿಂತಿದ್ದ ಮೈಸೂರಿನ  ಸಿದ್ದಲಿಂಗ ನಾಯಕ (70) ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಕೆ.ಆರ್.ನಗರ ಪೊಲೀಸರು ತಿಳಿಸಿದ್ದಾರೆ.

- Advertisement -

ಮನೆಯ ಹಿಂದೆ ಇದ್ದ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಲು ಹೋದ ಸಂದರ್ಭ  ಸಿಡಿಲಿನ ಹೊಡೆತದಿಂದ ಹಾಸನದ 42 ವರ್ಷದ ರೈತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಹಾಸನ ಪೊಲೀಸರು ಹೇಳಿದ್ದಾರೆ.

Join Whatsapp