ಮಂಗಳೂರಿನಲ್ಲಿ ಲ್ಯಾಂಡ್ ಆಗದ ವಿಮಾನಗಳು: 500ಕ್ಕೂ ಹೆಚ್ಚು ಪ್ರಯಾಣಿಕರ ಪರದಾಟ

Prasthutha|

ಮಂಗಳೂರು: ತಡ ರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇರೆಡೆಯಿಂದ ಬಂದಿದ್ದ ವಿಮಾನಗಳು ಲ್ಯಾಂಡ್ ಆಗಲು ತೊಂದರೆಯಾಗಿದ್ದು, ಹೀಗಾಗಿ ವಿಮಾನವನ್ನು ಬೇರೆ ಏರ್ ಪೋರ್ಟ್ ಗೆ ಕಳುಹಿಸಲಾಗಿದೆ.

- Advertisement -


ಮಂಗಳೂರು ಏರ್ ಪೋರ್ಟ್ ನಲ್ಲಿ ರನ್ ವೇ ಅಸ್ಪಷ್ಟವಾಗಿ ಕಂಡು ಬಂದ ಕಾರಣ, ಕುವೈತ್ ನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಸ್ವಲ್ಪ ಸಮಯ ಆಕಾಶದಲ್ಲಿಯೇ ಸುತ್ತಾಡಿ ಬಳಿಕ ಬೆಂಗಳೂರಿಗೆ ತೆರಳಿದೆ. ಚೆನ್ನೈ-ಮಂಗಳೂರು, ಹೈದರಾಬಾದ್-ಮಂಗಳೂರು ಹಾಗೂ ಮುಂಬೈ-ಮಂಗಳೂರು ವಿಮಾನಗಳು ಕೇರಳದ ಕೊಚ್ಚಿ ವಿಮಾನ ‌ನಿಲ್ದಾಣಕ್ಕೆ ಬಂದಿಳಿದಿವೆ.

ಮಂಗಳೂರಲ್ಲಿ ವಿಮಾನ ಲ್ಯಾಂಡಿಂಗ್ ಆಗದ ಕಾರಣ ಸುಮಾರು 500ಕ್ಕೂ ಅಧಿಕ ಪ್ರಯಾಣಿಕರಿಗೆ ತೊಂದರೆಯಾಗಿದೆ.

Join Whatsapp