ಸಹಜ ಸ್ಥಿತಿಯತ್ತ ದ.ಕ. ಜಿಲ್ಲೆ; ವ್ಯಾಪಾರ – ವಹಿವಾಟು ಚುರುಕು

Prasthutha|

ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಂದಿನಿಂದ ಅನ್ ಲಾಕ್ 3.0 ಜಾರಿಗೆ ಬಂದಿದ್ದು, ಜಿಲ್ಲೆ ಸಹಜ ಸ್ಥಿತಿಯೆಡೆಗೆ ಮರಳುತ್ತಿದೆ. ಬೆಳಿಗ್ಗಿನಿಂದಲೇ ವ್ಯಾಪಾರ ವಹಿವಾಟು ಜೋರಾಗಿದ್ದು, ಖಾಸಗಿ ಬಸ್ ಗಳ ಓಡಾಟ ಆರಂಭಗೊಂಡಿದೆ. ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್ ಗಳು, ಮಾಲ್ ಗಳು ಖಾಸಗಿ ಕಚೇರಿಗಳು ಬಹುತೇಕ ಪ್ರರಂಭವಾಗಿವೆ.

- Advertisement -

ಇಂದು ಬೆಳಗ್ಗೆ ಬಹುತೇಕ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲಾಗಿದ್ದು, ಸಾಮಾಜಿಕ ಅಂತರ, ಕೋವಿಡ್ ಶಿಷ್ಟಾಚಾರವನ್ನು ಪಾಲಿಸಲಾಗಿದೆ. ಮಂದಿರ ಹಾಗೂ ಚರ್ಚ್ ಗಳಲ್ಲೂ ಪ್ರಾರ್ಥನೆ ಆರಂಭಗೊಂಡಿದೆ.

ಇನ್ನು ಮಾರುಕಟ್ಟೆಗಳಲ್ಲಿ ತುಂತುರು ಮಳೆಯ ನಡುವೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮೀನು ಮಾರುಕಟ್ಟೆಯಲ್ಲೂ ಜನಜಂಗುಳಿ ಜೋರಾಗಿತ್ತು. ಬ್ಯಾಂಕು, ಅಂಚೆ ಕಚೇರಿಗಳಲ್ಲಿ ಎಂದಿಗಿಂತ ಹೆಚ್ಚಿನ ಗ್ರಾಹಕರು ಕಂಡುಬಂದರು.

- Advertisement -

 ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಮುಂದುವರಿಯಲಿದೆ. ವಾರಾಂತ್ಯ ಕರ್ಫ್ಯೂ ರದ್ದುಪಡಿಸಲಾಗಿದೆ. ಈ ನಿಯಮ ಮುಂದಿನ 14ದಿನಗಳವರೆಗೆ ಜಾರಿಯಲ್ಲಿರಲಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.

ರಾಜ್ಯಾದ್ಯಂತ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಆದರೆ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಇನ್ನೂ ಇಳಿಕೆಯಾಗದ ಕಾರಣ ಈ ಎರಡು ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳನ್ನು ಮುಂದುವರಿಸಲಾಗಿದೆ.



Join Whatsapp