ಸಂವಿಧಾನಪರ ಟ್ವೀಟ್ ಮಾಡಿದ ದಲಿತ ಉಪನ್ಯಾಸಕನನ್ನು ವಜಾಗೊಳಿಸಿದ ವಿಶ್ವವಿದ್ಯಾಲಯ

Prasthutha|

ಲಕ್ನೊ: ಸಂವಿಧಾನದ ಪರವಾಗಿ ಟ್ವೀಟ್ ಮಾಡಿದ ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದ ದಲಿತ ಅತಿಥಿ ಉಪನ್ಯಾಸಕರೊಬ್ಬರನ್ನು ಕೆಲಸದಿಂದ ವಜಾ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

- Advertisement -

ಮಹಾತ್ಮ ಗಾಂಧಿ ರಾಜ್ಯಶಾಸ್ತ್ರ ವಿಭಾಗದ ಮಿಥಿಲೇಶ್ ಕುಮಾರ್ ಗೌತಮ್ ಕೆಲಸದಿಂದ ವಜಾಗೊಂಡ ದಲಿತ ಅತಿಥಿ ಉಪನ್ಯಾಸಕ. ಅವರು ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ನೆಪವೊಡ್ಡಿ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು ಮಾತ್ರವಲ್ಲ ವಿಶ್ವವಿದ್ಯಾಲಯದ ಆವರಣಗೊಳಗೆ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ.

 ಅವರು ತಮ್ಮ ಪೋಸ್ಟ್ ನಲ್ಲಿ “ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುವ ಬದಲು ಒಂಬತ್ತು ದಿನಗಳ ಕಾಲ ಭಾರತೀಯ ಸಂವಿಧಾನ ಮತ್ತು ಹಿಂದೂ ಕೋಡ್ ಮಸೂದೆಯನ್ನು ಓದಿದರೆ ಮಹಿಳೆಯರ ಜೀವನವು ಗುಲಾಮಗಿರಿ ಮತ್ತು ಭಯದಿಂದ ಮುಕ್ತವಾಗುತ್ತದೆ” ಎಂದು ಬರೆದಿದ್ದರು.

- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್), ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಈ ಬಗ್ಗೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ದೂರು ನೀಡಿದ್ದರು.  ಈ ದೂರಿನ ಆಧಾರದಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.



Join Whatsapp