ರಾಜೀವ್ ಹತ್ಯೆಯ ಅಪರಾಧಿಗಳ ಬಿಡುಗಡೆ: ಸುಪ್ರೀಂ’ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಕೇಂದ್ರ ಸರ್ಕಾರ

Prasthutha|

ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡಿದ ನವೆಂಬರ್ 11ರ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್’ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

- Advertisement -

ಈ ಪ್ರಕರಣದ ಎಲ್ಲಾ ಆರು ಅಪರಾಧಿಗಳನ್ನು ಕಳೆದ ವಾರ ತಮಿಳುನಾಡು ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಕೈದಿಗಳ ಉತ್ತಮ ನಡವಳಿಕೆ ಮತ್ತು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇನ್ನೊಬ್ಬ ಅಪರಾಧಿ ಎ.ಜಿ. ಪೆರಾರಿವಾಲನ್ ಅವರ ಬಿಡುಗಡೆಯಾದ ಮೇಲೆ ತನ್ನ ನಿರ್ಧಾರ ಆಧರಿಸಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಬಂಧನದ ಸಂದರ್ಭದಲ್ಲಿ ಪೆರಾರಿವಾಲನ್ 19 ವರ್ಷದವರಾಗಿದ್ದರು ಮತ್ತು 30 ವರ್ಷಕ್ಕೂ ಅಧಿಕ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.

ಸಮರ್ಪಕವಾಗಿ ವಿಚಾರಣೆ ನಡೆಸದೆ ಅಪರಾಧಿಗಳ ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ.

- Advertisement -

ಆರು ಅಪರಾಧಿಗಳಲ್ಲಿ ನಾಲ್ವರು ಶ್ರೀಲಂಕಾದವರಾಗಿದ್ದು, “ದೇಶದ ಮಾಜಿ ಪ್ರಧಾನಿಯನ್ನು ಹತ್ಯೆ ಮಾಡಿದ ಭೀಕರ ಅಪರಾಧಕ್ಕಾಗಿ” ಭಯೋತ್ಪಾದಕರೆಂದು ಶಿಕ್ಷೆಗೊಳಗಾದವರು ಎಂದು ನರೇಂದ್ರ ಮೋದಿ ಸರ್ಕಾರವು ತಿಳಿಸಿದೆ.

Join Whatsapp