ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು RCP ಸಿಂಗ್ ರಾಜೀನಾಮೆ

Prasthutha|

ದೆಹಲಿ: ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಆರ್ ಸಿಪಿ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ರಾಜ್ಯಸಭಾ ಸಂಸದರಾಗಿ ತಮ್ಮ ಅವಧಿ ಗುರುವಾರ ಕೊನೆಗೊಳ್ಳಲಿದ್ದು, ಸಾಂವಿಧಾನಿಕ ಬಾಧ್ಯತೆಯನ್ನು ಪೂರೈಸಲು ಇಬ್ಬರೂ ಸಚಿವರು ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.ನಖ್ವಿ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಉಸ್ತುವಾರಿಯನ್ನು ಹೊಂದಿದ್ದರೆ, ಸಿಂಗ್ ಅವರು ಮೋದಿ 2.0 ಕ್ಯಾಬಿನೆಟ್ ನಲ್ಲಿ ಉಕ್ಕು ಸಚಿವರಾಗಿದ್ದರು.

ದೇಶದ ಅಭಿವೃದ್ಧಿಗಾಗಿ ನಖ್ವಿ ನೀಡಿದ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ನಖ್ವಿ ಅವರ ರಾಜ್ಯಸಭಾ ಅವಧಿಯು ಗುರುವಾರಕ್ಕೆ ಮುಕ್ತಾಯವಾಗಲಿದೆ.ಸಚಿವ ಸಂಪುಟ ಸಭೆ ಬಳಿಕ ನಖ್ವಿ ಅವರ ಬಿಜೆಪಿ ಅಧ್ಯಕ್ಷರನ್ನು ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಸಭೆ ನಂತರ ನಖ್ವಿ ಅವರು ಪ್ರಧಾನಿ ಮೋದಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಗುರುವಾರ ರಾಜ್ಯಸಭಾ ಅವಧಿ ಪೂರ್ಣಗೊಳ್ಳುವುದರಿಂದ ಅವರು ನಾಳೆ ರಾಜೀನಾಮೆ ನೀಡಬೇಕಿತ್ತು. ಆದರೆ ಇಬ್ಬರೂ ಒಂದು ದಿನ ಮುಂಚೆಯೇ ರಾಜೀನಾಮೆ ನೀಡಿದ್ದಾರೆ.



Join Whatsapp