ಇಂದಿರಾ ಗಾಂಧಿಯನ್ನು ‘ಭಾರತ ಮಾತೆ’ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ

Prasthutha|

ತ್ರಿಶೂರ್: ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ‘ಭಾರತ ಮಾತೆ’ ಎಂದು ಕರೆದಿದ್ದಾರೆ.

- Advertisement -


ಇದೇ ವೇಳೆ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ ಅವರನ್ನು ‘ಧೈರ್ಯಶಾಲಿ ಆಡಳಿತಗಾರ’ ಎಂದು ಬಣ್ಣಸಿದ್ದಾರೆ.


ತಮ್ಮ ಕ್ಷೇತ್ರವಾದ ತ್ರಿಶೂರ್ ನಲ್ಲಿರುವ ಕರುಣಾಕರನ್ ಅವರ ಸ್ಮಾರಕ ‘ಮುರಳಿ ಮಂದಿರಂ’ಗೆ ಭೇಟಿ ನೀಡಿದ ನಂತರ ಮಾತನಾಡಿದ ಸುರೇಶ್ ಗೋಪಿ, ಮಾಜಿ ಮುಖ್ಯಮಂತ್ರಿಗಳಾದ ಕರುಣಾಕರನ್ ಮತ್ತು ಇ.ಕೆ ನಾಯನಾರ್ ಅವರನ್ನು ತಮ್ಮ ‘ರಾಜಕೀಯ ಗುರುಗಳು’ ಎಂದು ಕರೆದಿದ್ದಾರೆ. ತಮ್ಮ ಹೇಳಿಕೆಗೆ ಯಾವುದೇ ರಾಜಕೀಯ ಅರ್ಥವನ್ನು ಸೇರಿಸಬೇಡಿ ಎಂದು ಸುದ್ದಿಗಾರರನ್ನು ಒತ್ತಾಯಿಸಿದ ಅವರು ನಾನು ನನ್ನ ‘ಗುರು’ಗಳಿಗೆ ಗೌರವ ಸಲ್ಲಿಸಲು ಸ್ಮಾರಕಕ್ಕೆ ಬಂದಿದ್ದೇನೆ ಎಂದಿದ್ದಾರೆ.

- Advertisement -


ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಭಾರತ ಮಾತೆ, ಮಾರ್ಕ್ಸ್ವಾದಿ ಹಿರಿಯ ನಾಯಕರನ್ನು ತನ್ನ ರಾಜಕೀಯ ಗುರು ಎಂದು ಕರೆದಿರುವ ಸುರೇಶ್ ಗೋಪಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದಿರಾ ಗಾಂಧಿ ಹೇಗೆ “ಭಾರತದ ಮಾತೆ”ಯೋ ಹಾಗೇ ಕರುಣಾಕರನ್ “ಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಪಿತಾಮಹ” ಎಂದು ಹೇಳಿದ್ದಾರೆ.

Join Whatsapp