ಭುವನೇಶ್ವರ: ಕೇಂದ್ರ ಸಚಿವ ಜುವಾಲ್ ಓರಮ್ ಅವರ ಪತ್ನಿ ಜಿಂಗಿಯಾ ಓರಮ್ ಡೆಂಗ್ಯೂ ಜ್ವರದಿಂದ ಮೃತರಾಗಿದ್ದಾರೆ. ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದಾರೆ.
ಶನಿವಾರ ರಾತ್ರಿ 10.50ರ ಸುಮಾರಿಗೆ ನಿಧನರಾದರು.58 ವರ್ಷದ ಜಿಂಗಿಯಾ ಓರಮ್ ಅವರು ಪತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇಂದ್ರ ಬುಡಕಟ್ಟು
ಸಚಿವ ಜುವಾಲ್ ಓರಮ್ ಕೂಡ ಡೆಂಗ್ಯೂನಿಂದ ಬಳಲುತ್ತಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜುವಾಲ್ ಓರಮ್ ಮತ್ತು ಜಿಂಗಿಯಾ ಮಾರ್ಚ್ 8, 1987 ರಂದು ವಿವಾಹವಾದರು.
ಅವರ ಅಂತ್ಯಕ್ರಿಯೆ ಸುಂದರ್ಗಢ ಜಿಲ್ಲೆಯ ಅವರ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಜಿಂಗಿಯಾ ಓರಮ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ