ಕೇಂದ್ರ ಸರ್ಕಾರ ಟೆಲಿಕಾಂ ನೀತಿ ಬದಲಾಯಿಸಿದೆ: ಉವೈಸಿ

Prasthutha|

ಶ್ರೀಮಂತರಿಗೆ ಮಾತ್ರ ಸೀಮಿತ ಪ್ರಧಾನಿ ಬೇಕೆ ಎಂದು ದೇಶ ನಿರ್ಧರಿಸಬೇಕು ಎಂದ ಎಐಎಂಐಎಂ ಮುಖ್ಯಸ್ಥ

- Advertisement -

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಂಪನಿಯೊಂದರಿಂದ 150 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಪಡೆದ ನಂತರ ಟೆಲಿಕಾಂ ನೀತಿಯನ್ನು ಬದಲಾಯಿಸಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಹೈದರಾಬಾದ್ ಸಂಸದ, ಮೋದಿ ಸರ್ಕಾರ ಕಂಪನಿಯೊಂದರಿಂದ 150 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಪಡೆದುಕೊಂಡಿದೆ ಮತ್ತು ಸರ್ಕಾರ ತನ್ನ ಟೆಲಿಕಾಂ ನೀತಿಯನ್ನು ಬದಲಾಯಿಸಿದೆ. ನೀತಿಯ ಬದಲಾವಣೆಯಿಂದ ಯಾರಿಗೆ ಲಾಭವಾಯಿತು ಎಂದು ನೀವು ಅರ್ಥಮಾಡಿಕೊಳ್ಳಬಹುದು.

- Advertisement -

2G ಒಂದು ಹಗರಣವಾಗಿದ್ದರೆ, ಇದು ಏನು? ಎಂದು ಕೇಳಿದ ಉವೈಸಿ, ಭಾರ್ತಿ ಗ್ರೂಪ್ ಈ ಮೊತ್ತವನ್ನು ದೇಣಿಗೆ ನೀಡಿದೆ ಎಂದು ಸೂಚಿಸುವ ಸುದ್ದಿ ಲೇಖನದ ಚಿತ್ರವನ್ನು ಟ್ಯಾಗ್ ಮಾಡಿದ್ದಾರೆ.

ಇನ್ನೊಂದು ಪೋಸ್ಟ್‌ ಮಾಡಿದ ಒವೈಸಿ, ತುಳಿತಕ್ಕೊಳಗಾದ ಭಾರತೀಯರೊಂದಿಗೆ ಆಳವಾದ ಬಾಂಧವ್ಯ ಹೊಂದಿರುವ ಪ್ರಧಾನಿಯನ್ನು ಆಯ್ಕೆ ಮಾಡಬೇಕೇ ಅಥವಾ ಶ್ರೀಮಂತರಿಗೆ ಮಾತ್ರ ಸೀಮಿತವಾಗಿರುವ ಪ್ರಧಾನಿಯನ್ನು ಆಯ್ಕೆ ಮಾಡಬೇಕೆ ಎಂದು ದೇಶವು ನಿರ್ಧರಿಸಬೇಕು ಎಂದು ಹೇಳಿದ್ದಾರೆ.



Join Whatsapp