ಕೇಂದ್ರ ಬಜೆಟ್ ನಿರಾಶಾದಾಯಕ: ಬಿ. ರಮನಾಥ ರೈ

Prasthutha|

ಮಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್-2024 ನಿರಾಶಾದಾಯಕವಾಗಿದೆ. ವಿತ್ತ ಸಚಿವರು ಕೇವಲ ಭರವಸೆ ಕೊಡುವ ಚುನಾವಣಾ ಭಾಷಣ ಮಾಡಿದರೋ ಅಥವಾ ಆಯವ್ಯಯ ಪತ್ರ ಮಂಡಿಸಿದರೋ ಎಂಬ ಸಂಶಯ ಬರುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ.

- Advertisement -

ಪ್ರಗತಿ, ಬೆಳವಣಿಗೆ, ಧ್ಯೇಯ, ಆಧ್ಯತೆ, ಗಮನ, ಸಹಾಯ, ಬೆಂಬಲ, ಸಹಕಾರ, ಕ್ರಮ, ಕಾರ್ಯಕ್ರಮ, ಮಂತ್ರ ಎಂಬ ಪದಗಳನ್ನು ಹೇಳಿದ್ದಾರೆ ಹೊರತು ನಿರ್ದಿಷ್ಟವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಈ ಬಜೆಟ್ ಪ್ರಾದೇಶಿಕತೆಯನ್ನು ಮರೆತಿದೆ. ವಲಯಗಳನ್ನು ಕಡೆಗಣಿಸಿದೆ. ವರ್ಗಗಳನ್ನು ನಿರ್ಲಕ್ಷ್ಯ ಮಾಡಿದೆ ಎಂದು ಮಾಜಿ ಗೃಹ ಸಚಿವ ರಮಾನಾಥ ರೈ ಪ್ರಕಟನೆಯಲ್ಲಿ ಹೇಳಿದ್ದಾರೆ.

ಯುವಕರು, ಅನ್ನದಾತರು, ಬಡವರು, ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆಯೇ ಹೊರತು ಈ ವರ್ಗಕ್ಕೆ ಬಜೆಟ್‌ನಲ್ಲಿ ವಿಶೇಷವಾದ ಘೋಷಣೆಯೇನೂ ಮಾಡಿಲ್ಲ. ಅಲ್ಲದೆ, ಸಮಗ್ರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಜೆಟ್‌ನಲ್ಲಿ ವಿಶೇಷ ಅನಿಸುವಂಥದ್ದು ಏನೂ ಇಲ್ಲ ಎಂದ ರಮಾನಾಥ ರೈ, ಇದು ಮೋದಿ ಸರ್ಕಾರದ ಅಂತಿಮ ಬಜೆಟ್ ಆಗಲಿದೆ ಎಂದು ಭವಿಷ್ಯ ಹೇಳಿದ್ದಾರೆ.



Join Whatsapp