ಕೇಂದ್ರ ಬಜೆಟ್ 2023: ಪ್ರಮುಖ ಅಂಶಗಳು

Prasthutha|

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಅವರು ಬಜೆಟ್ ಪ್ರತಿಯನ್ನು ಓದುತ್ತಿದ್ದಾರೆ. 2024ರ ಏಪ್ರಿಲ್- ಮೇ ತಿಂಗಳಲ್ಲಿ ಮುಂದಿನ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಬಜೆಟ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

- Advertisement -

ಕೇಂದ್ರ ಬಜೆಟ್ 2023: ಪ್ರಮುಖ ಅಂಶಗಳು

-ಸೂಕ್ಷ್ಮ ನೀರಾವರಿ ಪ್ರೋತ್ಸಾಹಿಸಲು ಭದ್ರಾ ಮೇಲ್ದಂಡೆಗೆ ₹5,300 ಕೋಟಿ: ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿಯನ್ನು ಹೊಂದಿರುವ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳ ಕೇಂದ್ರ ನೆರವು ನೀಡಲಾಗುವುದು. 

- Advertisement -

-157 ಹೊಸ ನರ್ಸಿಂಗ್ ಕಾಲೇಜು: 2014ರ ನಂತರ ಆರಂಭವಾಗಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಆರಂಭಿಸಲಾಗುವುದು.

  • * ರೈಲ್ವೆಗೆ 2.4 ಲಕ್ಷ ಕೋಟಿ ಹಣ ಮೀಸಲು. ದೇಶೀಯ ಪ್ರಯಾಣದ ಉತ್ತೇಜನಕ್ಕೆ 50 ಹೆಚ್ಚುವರಿ ವಿಮಾನ ನಿಲ್ದಾಣ, ಹೆಲಿಡ್ರಮ್‌’ಗಳ ನಿರ್ಮಾಣ.
  • ರೈತರು, ಮಹಿಳೆಯರು, ಯುವಜನತೆ, ಒಬಿಸಿ, ದಿವ್ಯಾಂಗರ ಸಹಿತ ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಭಿವೃದ್ಧಿಯ ಬಜೆಟ್‌ ನೀಡುವ ವಾಗ್ದಾನ ನೀಡಿದ ವಿತ್ತ ಸಚಿವೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್‌, ಈಶಾನ್ಯ ರಾಜ್ಯಗಳನ್ನು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯ ಭರವಸೆ.
  • ಜಾಮೀನು ಹಣವನ್ನು ಹೊಂದಿಸಲಾಗದೆ ಸೆರೆವಾಸದಲ್ಲಿರುವ ಬಡ ಬಂದಿಗಳಿಗೆ ಅಗತ್ಯ ಆರ್ಥಿಕ ಸಹಕಾರವನ್ನು ನೀಡುವ ಭರವಸೆ.
  • ಮ್ಯಾನ್‌’ಹೋಲ್‌’ಗಳ ಶುದ್ಧಗೊಳಿಸಲು ಸಂಪೂರ್ಣವಾಗಿ ಯಂತ್ರಗಳ ಬಳಕೆ. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಒತ್ತು.
    -ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲು
Join Whatsapp