ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಶ್ರೀಘ ಜಾರಿ: ಪುಷ್ಕರ್ ಸಿಂಗ್ ಧಾಮಿ

Prasthutha|

ನವದೆಹಲಿ: ರಾಜ್ಯದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಾಗಲಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರನ್ನು ಉತ್ತರಾಖಂಡಕ್ಕೆ ಭೇಟಿ ನೀಡಲು ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ.


ಪ್ರಧಾನಿ ಜೊತೆಗಿನ ಚರ್ಚೆಯ ವೇಳೆ ಯುಸಿಸಿ ವಿಷಯ ಪ್ರಸ್ತಾಪವಾಯಿತೇ ಎನ್ನುವ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಧಾಮಿ ‘ಪ್ರಧಾನಿ ಅವರಿಗೆ ಈ ಬಗ್ಗೆ ಎಲ್ಲಾ ವಿವರ ತಿಳಿದಿದೆ’ ಎಂದಷ್ಟೇ ಹೇಳಿದರು.



Join Whatsapp