ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಮಾನ ನಾಗರಿಕ ಸಂಹಿತೆ ಮಸೂದೆಯನ್ನು ಮಂಡಿಸಿದರು.
ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಜಾರಿಗೆ ತರಲು ಕರೆಯಲಾದ ವಿಶೇಷ ವಿಧಾನಸಭೆಯ ಎರಡನೇ ದಿನವಾದ ಮಂಗಳವಾರ ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಸದನವು ಅಂಗೀಕರಿಸಿದ್ದು, ಬಿಜೆಪಿ ಆಡಳಿತದ ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಅಳವಡಿಸಿಕೊಂಡ ದೇಶದ ಮೊದಲ ರಾಜ್ಯವಾಗಿದೆ.
ಸಮಾನ ನಾಗರಿಕ ಸಂಹಿತೆಯ ಅನ್ವಯ ಎಲ್ಲಾ ಸಮುದಾಯಗಳಿಗೆ ವಿವಾಹ, ವಿಚ್ಛೇದನ, ಜಮೀನು, ಆಸ್ತಿ ಸಂಬಂಧಿಸಿದಂತೆ ಸಮಾನ ಕಾನೂನುಗಳು ಜಾರಿಗೆ ಬರಲಿವೆ.