ಉಡುಪಿ ಕಾಲೇಜಿನ ವೀಡಿಯೋ ಹಂಚಿಕೊಂಡ ಯುನೆಸ್ಕೊ ಅಧ್ಯಕ್ಷ

Prasthutha|

ನವದೆಹಲಿ: ಉಡುಪಿ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು ತರಗತಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂಬ ಪದವನ್ನು ಬಳಸಿ ವಿವಾದಕ್ಕೆ ಕಾರಣವಾಗಿದ್ದು, ಈ ವೀಡಿಯೋವನ್ನು ಯುನೆಸ್ಕೋ ಅಧ್ಯಕ್ಷ ತಮ್ಮ ಟ್ವಿಟ್ವರ್ ನಲ್ಲಿ ಹಂಚಿಕೊಂಡಿದ್ದಾರೆ.

- Advertisement -


ಯುನೆಸ್ಕೋ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಅಧ್ಯಕ್ಷರೂ ಆಗಿರುವ ಪ್ರೊಫೆಸರ್ ಅಶೋಕ್ ಸ್ವೈನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.


ಜೊತೆಗೆ, ಭಾರತದ ತರಗತಿ ಕೋಣೆಯಲ್ಲಿ ಒಬ್ಬ ಪ್ರೊಫೆಸರ್ ಒಬ್ಬ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆಯುತ್ತಾನೆ – ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವುದು ಎಂದರೆ ಇದೇ ಆಗಿದೆ ಎಂದಿದ್ದಾರೆ.

- Advertisement -



Join Whatsapp