ಪುತ್ತೂರು: ಹಿಜಾಬ್ ಗಾಗಿ ಪಟ್ಟುಹಿಡಿದ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರೇ ನೀವೊಮ್ಮೆ ವಿದೇಶಕ್ಕೆ ಹೋಗಿ ನೋಡಿ ಎಂಬ ಖಾದರ್ ಹೇಳಿಕೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಸಮರ್ಥಿಸಿಕೊಂಡಿದ್ದಾರೆ.
ಹಿಜಾಬ್ ವಿಚಾರದಲ್ಲಿ ಶಾಸಕ ಮತ್ತು ಮುಸ್ಲಿಂ ಮುಖಂಡರೂ ಆದಂತಹ ಯುಟಿ ಖಾದರ್ ಅವರ ಹೇಳಿಕೆ ಸ್ವಾಗತಾರ್ಹ. ಹಿಜಾಬ್ ವಿಷಯದಲ್ಲಿ ಕುಮ್ಮಕ್ಕು ನೀಡುವಂತಹ ಮತೀಯ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿಜಾಬ್ ಸಂಬಂಧ ಉಪ್ಪಿನಂಗಡಿ ಕಾಲೇಜಿನಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗಿದೆ. ಹಿಜಾಬ್ ಗಾಗಿ ಪಟ್ಟುಹಿಡಿದ ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ. ಇಂತಹ ಗೊಂದಲಗಳ ಮಧ್ಯೆ ಯುಟಿ ಖಾದರ್ ಹೇಳಿಕೆ ಸರಿಯಾಗಿಯೇ ಇದೆ ಎಂದು ಯುಟಿಕೆ ಪರ ಶಾಸಕರು ಬ್ಯಾಟಿಂಗ್ ಮಾಡಿದ್ದಾರೆ.
ವಿದ್ಯಾರ್ಥಿನಿಯರ ಹಕ್ಕಿನ ಪರ ಮಾತಾಡುವುದನ್ನು ಬಿಟ್ಟು ಅವರ ವಿರುದ್ಧ ಹೇಳಿಕೆ ನೀಡಿರುವಂತಹ ಯುಟಿ ಖಾದರ್ ಗೆ ತನ್ನ ಅನುಯಾಯಿಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತಿರುವ ಮಧ್ಯೆ ಬಿಜೆಪಿ ಮತ್ತು ಹಿಂದೂ ಮುಖಂಡರು ಯುಟಿಕೆಗೆ ಬೆಂಬಲ ನೀಡುತ್ತಾ ಕಣಕ್ಕಿಳಿದಿದ್ದಾರೆ.