ಉಮೇಶ್ ಪಾಲ್ ಹತ್ಯೆ ಪ್ರಕರಣ: ಮತ್ತೋರ್ವ ಆರೋಪಿಯ ಎನ್’ಕೌಂಟರ್

Prasthutha|

ಲಕ್ನೋ: ಉಮೇಶ್ ಪಾಲ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ವಿಜಯ್ ಅಲಿಯಾಸ್ ಉಸ್ಮಾನ್ ಎಂಬಾತನನ್ನು ಸೋಮವಾರ ಬೆಳಗ್ಗಿನ ಜಾವ ಪೊಲೀಸರು ಎನ್’ಕೌಂಟರ್ ಮಾಡಿದ್ದಾರೆ.

- Advertisement -

ಸೋಮವಾರ ಬೆಳಗ್ಗೆ 5.30ರ ಸುಮಾರಿಗೆ ಕೌಂದಿಯಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ ಕೌಂಟರ್ ಮಾಡಲಾಗಿದೆ ಎಂದು ಧುಮಾಂಗ್’ಗಂಜ್ ಪೊಲೀಸ್ ಠಾಣೆಯ ಅಧಿಕಾರಿ(ಎಸ್’ಎಚ್’ಒ) ರಾಜೇಶ್ ಕುಮಾರ್ ಮೌರ್ಯ ತಿಳಿಸಿದ್ದಾರೆ.

ಫೆಬ್ರವರಿ 24 ರಂದು ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಉಸ್ಮಾನ್ ಭಾಗಿಯಾಗಿದ್ದ ಎಂದು ಅವರು ತಿಳಿಸಿದರು.

- Advertisement -

ಮಾಜಿ ಬಿಎಸ್’ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಮತ್ತು ಅವರ ಪೊಲೀಸ್ ಭದ್ರತಾ ಸಿಬ್ಬಂದಿ ಸಂದೀಪ್ ನಿಶಾದ್ ಮತ್ತು ರಾಘವೇಂದ್ರ ಸಿಂಗ್ ಅವರನ್ನು ಫೆಬ್ರವರಿ 24 ರಂದು ಧೂಮನ್’ಗಂಜ್ ಪ್ರದೇಶದ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.

ಪಾಲ್ ಅದೇ ದಿನ ಮೃತಪಟ್ಟರೆ, ಭದ್ರತಾ ಸಿಬ್ಬಂದಿ ಚಿಕಿತ್ಸೆಯ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಕೆಲವು ದಿನಗಳ ನಂತರ, ದಾಳಿಕೋರರ ಎಸ್’ಯುವಿಯನ್ನು ಚಲಾಯಿಸಿದ ಅರ್ಬಾಝ್ ಎಂಬಾತನನ್ನು ಪ್ರಯಾಗ್’ರಾಜ್’ನಲ್ಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

Join Whatsapp