ಬೆಳಗಾವಿ ಜೆಲ್ಲೆ ವಿಭಜನೆಗೆ ಉಮೇಶ್ ಕತ್ತಿ ಒತ್ತಾಯ

Prasthutha|

ಬೆಳಗಾವಿ: ಅಭಿವೃದ್ದಿಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವಂತೆ ಸಚಿವ ಉಮೇಶ್ ಕತ್ತಿ ಸರಕಾರವನ್ನು ಒತ್ತಾಯಿಸಿದ್ದಾರೆ. ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆ ರಚನೆಗೆ ಒತ್ತಾಯ ಮಾಡಿರುವ ಸಚಿವರ ಒಲವಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲ ಸೂಚಿಸಿದ್ದಾರೆ.

- Advertisement -

ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಮೂರು ವಿಭಾಗಗಳಿವೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿಭಜನೆಯಾಗಬೇಕು ಎಂದು ಸಚಿವ ಮೇಶ್ ಕತ್ತಿ ಹೇಳಿದ್ದಾರೆ. ಗೋಕಾಕ್ ನೂತನ ಜಿಲ್ಲೆ ರಚನೆಗೆ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಹುಕ್ಕೇರಿ ಜಿಲ್ಲೆ ಮಾಡಬೇಕೆಂದು ನನಗೂ ಆಸೆ ಇದೆ. ಆದರೆ ಹುಕ್ಕೇರಿಯನ್ನು ಜಿಲ್ಲೆಯಾಗಿ ಮಾಡಲು ಸಾಧ್ಯವಿಲ್ಲ, ಅದೇ ರೀತಿ ಗೋಕಾಕ್ ಅನ್ನೂ ಜಿಲ್ಲೆಯಾಗಿ ಮಾಡಲು ಆಗುವುದಿಲ್ಲ ಎಂದರು.

ಅಕ್ರಮವಾಗಿ ಪಡಿತರ ಚೀಟಿ ಪಡೆದ ಸರ್ಕಾರಿ ನೌಕರರಿಗೆ ದಂಡ ವಿಚಾರವಾಗಿ ಮಾತನಾಡಿದ ಅವರು, ನಾನು ಅಧಿಕಾರ ವಹಿಸಿಕೊಂಡ ಬಳಿಕ 13 ಲಕ್ಷ ಕಾರ್ಡ್ ರದ್ದು ಮಾಡಲಾಗಿದೆ. ಅಕ್ರಮವಾಗಿ ಪಡೆದಿರುವ 13 ಲಕ್ಷ ಪಡಿತರ ಕಾರ್ಡ್‌ಗಳು ರದ್ದು ಮಾಡಲಾಗಿದೆ. ಹೊಸದಾಗಿ 4 ಲಕ್ಷ ಜನರು ಪಡಿತರ ಚೀಟಿಗೆ ಅರ್ಜಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ,

Join Whatsapp