ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಬಿಜೆಪಿ ಸಂಸದ ಉಮೇಶ್ ಜಾಧವ್

Prasthutha|

- Advertisement -

ಕಲಬುರಗಿ: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಶಿವಮೊಗ್ಗ ಗಲಾಟೆ ಕುರಿತು ಸಂಸದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ.

ಸರ್ಕಾರ ಮುಂಜಾಗೃತ ಕ್ರಮ ಕೈಗೊಂಡಿದ್ದರೆ ಶಿವಮೊಗ್ಗ ಘಟನೆ ನಡೆಯುತ್ತಿರಲಿಲ್ಲ. ಈದ್ ಮಿಲಾದ್ ಎಂದರೆ ಸೌಹಾರ್ದಯುತ ಹಬ್ಬವಾಗಿರುತ್ತದೆ. ಆದರೆ ಕೆಲ ಕಿಡಿಗೇಡಿಗಳು ಅದೇ ದಿನ ಕಲ್ಲು ತೂರಾಟ ನಡೆಸಿ ಶಾಂತಿ ಭಂಗ ಮಾಡುವ ಯತ್ನ ಮಾಡಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

Join Whatsapp