78ನೇ ಸ್ವಾತಂತ್ರ್ಯ ದಿನಾಚರಣೆ: ಪುದು ಗ್ರಾಮದ ವಿವಿಧೆಡೆ ಉಮರ್ ಫಾರೂಕ್’ರಿಂದ ಧ್ವಜಾರೋಹಣ

Prasthutha|

- Advertisement -

ಬಂಟ್ವಾಳ: 78ನೇ ಸ್ವಾತಂತ್ರ್ಯ ದಿನಚರಣೆಯ ಅಂಗವಾಗಿ ಪುದು ಗ್ರಾಮದ ವಿವಿದೆಡೆ ಅದ್ದೂರಿಯಾಗಿ ಆಚರಿಸಲಾಯಿತು.

ಸರ್ಕಾರಿ ಪ್ರೌಢಶಾಲೆ ಸುಜೀರ್, ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಇಸ್ಲಾಹುಲ್ ಮುಸ್ಲಿಮೀನ್ ಮದ್ರಸ ಫರಂಗಿಪೇಟೆ ಹಾಗೂ ಪುದು ಮಾಪ್ಲ ಶಾಲೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫರೂಕ್ ಧ್ವಜಾರೋಹಣ ನೆರವೇರಿಸಿದರು.

- Advertisement -

ಸುಜೀರು ಶಾಲೆಯಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದ ಉಮರ್ ಫರೂಕ್ , ಭಾರತ ದೇಶದ ಜನರು ಸುಂದರ ಶಾಂತಿಯುತ ಬದುಕನ್ನು ರೂಪಿಸಿಕೊಂಡ ದಿನವೇ ಈ ಸ್ವಾತಂತ್ರ‍್ಯ ದಿನ. 200 ವರ್ಷಗಳ ಕಾಲ ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಸ್ವಾತಂತ್ರ‍್ಯ ಪಡೆಯಲು ಹಗಲು ರಾತ್ರಿ ಹೋರಾಟ ಮಾಡಬೇಕಾಯಿತು.

ಸ್ವಾತಂತ್ರ‍್ಯ ಹೋರಾಟಗಾರರು ಅನುಭವಿಸಿದ ಕಷ್ಟಗಳನ್ನು ಇತಿಹಾಸದ ಪುಟದಿಂದ ತಿಳಿಯಬಹುದು ಎಂದರು.

ಈ ವೇಳೆ ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಗಾ.ಪಂ ಸದಸ್ಯ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ, ಸದಸ್ಯರಾದ ಝೀನತ್, ರೆಹನಾ, ಇಶಾಮ್ ಫರಂಗಿಪೇಟೆ, ಇಕ್ಬಾಲ್ ಪಾಡಿ, ಕಿಶೋರ್ ಕುಮಾರ್, ಇಸ್ಮಾಯಿಲ್ ಕುಂಜತ್ಕಲ, ಮಜೀದ್ ಫರಂಗಿಪೇಟೆ, ಸಲಾಂ ಮಲ್ಲಿ, ಬದ್ರುದ್ಧಿನ್ ಕರ್ಮಾರ್, ಮೊಹಮ್ಮದ್ ಘಾನಿ, ಹಾಗೂ ಶಾಲಾ ಮುಖ್ಯಶಿಕ್ಷಕಿ ಗೀತಾ, ಅಬೂಬಕ್ಕರ್ ಫರಂಗಿಪೇಟೆ, ಇಸ್ಮಾಯಿಲ್ ಹತ್ತನೇ ಮೈಲ್ ಕಲ್ಲು, ಪುದು ಮಾಪ್ಲ ಶಾಲೆಯ ಮುಖ್ಯೋಪಾಧ್ಯಾಯಿನಿ ಯಮುನಾ, ಫರಂಗಿಪೇಟೆ ಜುಮ್ಮಾ ಮಸೀದಿಯ ಖತೀಬ್ ಝಕರಿಯಾ ದಾರಿಮಿ, ನಝೀರ್ ಎಫ್, ಪಂಚಾಯತ್ ಸದಸ್ಯೆ ರಝಿಯಾ, ಪುದು ಶಾಲೆಯ ಅಧ್ಯಕ್ಷ ರಮ್ಲಾನ್ ಕುಂಪನಮಜಲ್, ಇಮ್ರಾನ್ ಮಾರಿಪಳ್ಳ ಹಾಗೂ ಇತರರು ಉಪಸ್ಥಿತರಿದ್ದರು.



Join Whatsapp