ಉಳ್ಳಾಲ: ಈಜಲು ಹೋಗಿ ಇಬ್ಬರು ಮೃತ್ಯು

Prasthutha|

ಮಂಗಳೂರು: ಈಜಾಡಲು ಹೋದ ಇಬ್ಬರು ಯುವಕರು ಬಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಮಂಗಳೂರು ಸಮೀಪದ ಉಳ್ಳಾಲ ಕಡಲ ತೀರದಲ್ಲಿ ನಡೆದಿದೆ.

- Advertisement -

ಉಳ್ಳಾಲದ ದರ್ಗಾಕ್ಕೆ ಬಂದಿದ್ದ ವೇಳೆ ಸಮುದ್ರದಲ್ಲಿ ಈಜಾಡಲು ಯುವಕರು ತೆರಳಿದ್ದಾರೆ.ಈ ವೇಳೆ ಅಲೆಗಳ ರಭಸಕ್ಕೆ ಕೊಚ್ಚಿಹೋಗಿದ್ದಾರೆ. ಜೀವರಕ್ಷಕ ದಳದಿಂದ ಶೋಧಕಾರ್ಯ ನಡೆಸಿದಾಗ ಸಲ್ಮಾನ್‌ನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಲ್ಮಾನ್ ಮೃತಪಟ್ಟಿದ್ದಾರೆ. ಇನ್ನೋರ್ವ ಸಮುದ್ರ ಪಾಲಾಗಿದ್ದು, ಜೀವರಕ್ಷಕ ತಂಡ ಶೋಧಕಾರ್ಯ ಮುಂದುವರಿಸಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp