ಉಳ್ಳಾಲ: ಗಾಂಜಾ ವ್ಯಸನಿಯನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ ಪೊಲೀಸರು

Prasthutha|

ಉಳ್ಳಾಲ: ಹೆದ್ದಾರಿ ನಡುವೆ ನಿಂತಿದ್ದ ಗಾಂಜಾ ವ್ಯಸನಿಯನ್ನು ಕೊಣಾಜೆ ಠಾಣಾ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

- Advertisement -

ಉಳ್ಳಾಲ ಮುಕ್ಕಚ್ಚೇರಿ ಕೈಕೋ ನಿವಾಸಿ ಅಬೂಬಕರ್ ಸಿದ್ದೀಖ್‌( 24) ಬಂಧಿತ ಆರೋಪಿ.

ಗಾಂಜಾ ಸೇವಿಸಿ ಬೈಕಿನಲ್ಲಿ ಬಂದಿದ್ದ ಆರೋಪಿ ಸಾರ್ವಜನಿಕವಾಗಿ ಆತಂಕ ಸೃಷ್ಟಿಸಿದ್ದ. ಸ್ಥಳೀಯರು ಕೊಣಾಜೆ ಠಾಣಾ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕಾಗಮಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾದರು.

Join Whatsapp