ಸೆ.29ರಂದು ಉಳ್ಳಾಲ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ- 2023

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ತಾಲ್ಲೂಕು ಪಂಚಾಯತ್ ಉಳ್ಳಾಲ , ಉಳ್ಳಾಲ ನಗರ ಸಭೆ, ದೈಹಿಕ ಶಿಕ್ಷಣ ವಿಭಾಗ ಮಂಗಳೂರು ವಿಶ್ವ ವಿದ್ಯಾನಿಲಯ, ಉಳ್ಳಾಲ ತಾಲೂಕು ವಾಲಿಬಾಲ್ ಅಶೋಸಿಯೇಷನ್ , ಜೆಸಿಐ ಮಂಗಳಗಂಗೋತ್ರಿ ಕೊಣಾಜೆ, ಇವುಗಳ ಸಹಯೋಗದೊಂದಿಗೆ ಉಳ್ಳಾಲ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ. 29ರಂದು ಶುಕ್ರವಾರ ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.

- Advertisement -

ಭಾಗವಹಿಸುವ ಎಲ್ಲಾ ತಂಡಗಳು ಬೆಳಗ್ಗೆ 9 ಗಂಟೆಯ  ಒಳಗೆ  ಕ್ರೀಡಾ0ಗಣದಲ್ಲಿ ಉಪಸ್ಥಿತರಿರಬೇಕು.

ಪುರುಷರ ವಿಭಾಗದ ಸ್ಪರ್ಧೆಗಳು:

- Advertisement -

100 ಮೀ , 200 ಮೀ , 400 ಮೀ , 800 ಮೀ , 1500ಮೀ ,5000 ಮೀ 10000 ಮೀ ಓಟ.ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತ್ರಿವಿಧ ಜಿಗಿತ , ಜಾವೆಲಿನ್ ಎಸೆತ , ಡಿಸ್ಕಸ್ ಎಸೆತ , 110 ಮೀ ಹರ್ಡಲ್ಸ್ , 4*100 ಮೀ ರಿಲೇ, 4*400 ಮೀ ರಿಲೇ, ವಾಲಿಬಾಲ್, ತ್ರೋಬಾಲ್, ಫುಟ್ಬಾಲ್, ಖೋ ಖೋ, ಕಬಡ್ಡಿ, ಯೋಗ

ಮಹಿಳೆಯರ ವಿಭಾಗದ ಸ್ಪರ್ಧೆಗಳು:100 ಮೀ, 200 ಮೀ, 400 ಮೀ, 800 ಮೀ, 1500 ಮೀ, 3000 ಮೀ ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ತ್ರಿವಿಧ ಜಿಗಿತ, ಜಾವೆಲಿನ್ ಎಸೆತ , ಡಿಸ್ಕಸ್ ಎಸೆತ , 100 ಮೀ ಹರ್ಡಲ್ಸ್,  4*100 ಮೀ ರಿಲೇ, 4* 400 ಮೀ ರಿಲೇ, ವಾಲಿಬಾಲ್, ತ್ರೋಬಾಲ್, ಫುಟ್ಬಾಲ್, ಖೋ ಖೋ, ಕಬಡ್ಡಿ , ಯೋಗ .

ಈ ಪಂದ್ಯಾಟಗಳಿಗೆ ಹೆಸರು ನೋಂದಾಯಿಸಿಕೊಳ್ಳಲು ಮತ್ತು ಮಾಹಿತಿಗಾಗಿ ಕಚೇರಿ ಸಂಖ್ಯೆ 0824-2451264, ಹಾಗು ತಾಲೂಕು  ದಸರಾ ನೋಡಲ್  ಅಧಿಕಾರಿ ತ್ಯಾಗಮ್ ಹರೇಕಳ ದೂರವಾಣಿ ಸಂಖ್ಯೆ 9448529524, 8904842924 ಇವರನ್ನು ಸಂಪರ್ಕಿಸಲು ಕೋರಲಾಗಿದೆ.