ಉಳ್ಳಾಲ: SDTU ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Prasthutha|

ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ತೊಕ್ಕೊಟ್ಟು ಮೈದಾನದಲ್ಲಿ ಆಚರಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ SDTU ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ಕಾರ್ಮಿಕ ದಿನಾಚರಣೆಯ ಹಿನ್ನೆಲೆಗೆ  ಕಾರ್ಮಿಕರ ಹೋರಾಟದ ಯಶೋಗಾಥೆಯ ಇತಿಹಾಸವಿದೆ. ಪ್ರಭುತ್ವದ ದಮನಕಾರಿ ಕಾರ್ಮಿಕ ವಿರೋಧಿ ಶೋಷಣೆ ಮಿತಿಮೀರಿದ ಸಂದರ್ಭದಲ್ಲಿ ಕಾರ್ಮಿಕರೆಲ್ಲರೂ ಒಟ್ಟು ಸೇರಿ ತ್ಯಾಗ ಬಲಿದಾನ ನಡೆಸಿದ ಫಲ ಇಂದು ವಿವಿಧ ದೇಶಗಳಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ವಿವಿಧ ಕಾಯ್ದೆಗಳು ನಿಗಮಗಳು ಆಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.  

ನಮ್ಮ ರಾಜ್ಯದಲ್ಲಿ ಸರಕಾರ ಆಟೋ ರಿಕ್ಷಾ ಚಾಲಕರಿಗೆ ನಿಗಮಗಳನ್ನು ಸ್ಥಾಪಿಸಿ ಇನ್ನಿತರ ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ತರಬೇಕು ಮತ್ತು ಸರಕಾರ ಕಾರ್ಮಿಕರಿಗೆ ನೀಡುವ ಸೌಲಭ್ಯಗಳು ಎಲ್ಲಾ ಅರ್ಹ ಕಾರ್ಮಿಕರಿಗೆ ತಲುಪುವಂತಾಗಬೇಕು ಎಂದು ಅವರು ಆಗ್ರಹಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು SDTU ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಕಣ್ಣಂಗಾರ್ ವಹಿಸಿ ದ್ವಜಾರೋಹಣಗೈದರು.

ಮಂಗಳೂರು (ಉಳ್ಳಾಲ) ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಅಬ್ದುಲ್ಲ ಕೆಸಿರೋಡ್, ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಕಣ್ಣೂರು, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಖಾದರ್ ಆಳಂಪಾಡಿ , ಉಳ್ಳಾಲ ಆಟೋ ಘಟಕ ಅಧ್ಯಕ್ಷ ಖಲೀಲ್ ಉಳ್ಳಾಲ, ಕಾರ್ಯದರ್ಶಿ ಸಾದಿಕ್, ಸುರತ್ಕಲ್ ಘಟಕ ಅಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಕಬೀರ್, ಮಂಗಳೂರು ಘಟಕ ಅಧ್ಯಕ್ಷ ಇಲ್ಯಾಸ್ ಬೆಂಗರೆ, ಕಾರ್ಯದರ್ಶಿ ಫಿರೋಝ್, ಮನ್ಸೂರ್, ಇಮ್ರಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಅಬ್ದುಲ್ ಖಾದರ್ ಉಳ್ಳಾಲ, ಸವೆರಾ ಅಬ್ಬಕ್ಕ ವೃತ್ತ, ಅಬ್ದುಲ್ ಖಾದರ್ ಮಾಸ್ತಿಕಟ್ಟೆ ಯವರ ಸೇವಾ ಹಿರಿತನಕ್ಕೆ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಉಳ್ಳಾಲ ಅಬ್ಬಕ್ಕ ವ್ರತ್ತದಿಂದ ತೊಕ್ಕೊಟ್ಟು ಜಂಕ್ಷನ್ ವರೆಗೆ ಆಟೋ ರಿಕ್ಷಾ ರ್‍ಯಾಲಿ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಾನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.