ಉಳ್ಳಾಲ: ಎಸ್ ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ವತಿಯಿಂದ ಚುನಾವಣೆ ಪೂರ್ವ ಕಾರ್ಯಕರ್ತರ ಸಭೆ

Prasthutha|

ಬೋಳಿಯಾರ್:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಚುನಾವಣಾ ಪೂರ್ವ ಕಾರ್ಯಕರ್ತರ ಸಭೆ ಬೋಳಿಯಾರ್ ನಲ್ಲಿ ಪಕ್ಷದ ವಿಧಾನ ಸಭಾ ಸಮಿತಿಯ ಅಧ್ಯಕ್ಷ  ಇರ್ಷಾದ್ ಅಜ್ಜಿನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.  ಸಭೆಯನ್ನು ಉದ್ದೇಶಿಸಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಶ್ರಫ್ ಮಂಚಿ  ಪ್ರಾಸ್ತಾವಿಕ ಭಾಷಣ ಮಾಡಿದರು.

- Advertisement -

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಎಸ್. ಡಿ. ಪಿ. ಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು,   ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಫ್ಯಾಶಿಸ್ಟ್ ಮನೋಭಾವದ ಸರಕಾರದ ದುರಹಂಕಾರದ ವರ್ತನೆಗಳು ಹಾಗೂ ವಿರೋಧ ಪಕ್ಷಗಳ ನಿಷ್ಕ್ರಿಯತೆ ಬಗ್ಗೆ ವಿವರಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಸಾಮಾಜಿಕ ಪ್ರಜಾಪ್ರಭುತ್ವದ ಅಡಿಪಾಯದಲ್ಲಿ ರೂಪುಗೊಂಡ  SDPI ಪಕ್ಷದಿಂದ ಮಾತ್ರ ಸಾಧ್ಯ. ಆದ್ದರಿಂದ ಇಂದಿನ ಸಂಕಷ್ಟ ಕಾಲಘಟ್ಟದಲ್ಲಿ  ಪಕ್ಷದ  ಬಲವರ್ಧನೆ ಬಗ್ಗೆ ಹಾಗೂ ಮುಂದಿನ ಚುನಾವಣೆ ತಯಾರಿ ಬಗ್ಗೆ ಕಾರ್ಯಕರ್ತರು ಸಜ್ಜಾಗುವ ಮೂಲಕ SDPI ಅಭ್ಯರ್ಥಿಯನ್ನು ವಿಧಾನಸಭೆಗೆ ಕಳಿಸಲು ಪಣ ತೊಡಬೇಕು ಆ ಮೂಲಕ ಮಂಗಳೂರು ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.

- Advertisement -

 ಸಮಾರೋಪ ಭಾಷಣ ಮಾಡಿದ   SDPI  ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರ್,  ಪಕ್ಷವನ್ನು ತಳಮಟದಲ್ಲಿ ಕಟ್ಟಿ ಬೆಳೆಸಿ ಜನಸಾಮಾನ್ಯರ ಧ್ವನಿಯಾಗಿ   ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. ವಂಶಪಾರಂಪರ್ಯ ಹಾಗೂ ಕೋಮುವಾದಿ ಶಕ್ತಿಗಳನ್ನು ಈ ಚುನಾವಣೆಯಲ್ಲಿ ಮನೆಗೆ ಕಳಿಸಲು ಪ್ರತಿಯೊಬ್ಬ ಕಾರ್ಯಕರ್ತನು ಶಪಥ ಮಾಡಬೇಕು ಎಂದು ಕರೆ ನೀಡಿದರು.

SDPI ಪಕ್ಷವನ್ನು ಮುಗಿಸುವ ಹತಾಶೆ ಪ್ರಯತ್ನ ಮಾಡುತ್ತಿರುವ ಬಿಜೆಪಿಯೊಂದಿಗೆ ಕೈ ಜೋಡಿಸುತ್ತಿರುವ ಸೋಕಾಲ್ಡ್ ಜಾತ್ಯತೀತ  ಶಕ್ತಿಗಳ ವಂಚನೆಯ ಬಗ್ಗೆ ಪ್ರತಿಯೊಬ್ಬ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ಮುಂದೊಂದು ದಿನ SDPI ಈ ಕ್ಷೇತ್ರದಲ್ಲಿ  ಫಿನೀಕ್ಷ್ ಪಕ್ಷಿಯಂತೆ ಎದ್ದು ಬರಲಿದೆ ಎಂದು ಭವಿಷ್ಯ ನುಡಿದರು.

 ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಲತೀಫ್ ಕೋಡಿಜಾಲ್ ಸ್ವಾಗತಿಸಿದರು.  ಅಶ್ರಫ್ ಮೋನು ಬೋಳಿಯಾರ್ ನಿರೂಪಣೆ ಮಾಡಿದರು . ಜಿಲ್ಲಾ ಸಮಿತಿ ಸದಸ್ಯರಾದ ನಾಸಿರ್ ಸಜಿಪ , ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫೌಝಿಯಾ ಇಕ್ಬಾಲ್ ಉಪಸ್ಥಿತರಿದ್ದರು.  ಕ್ಷೇತ್ರ ಜೊತೆ ಕಾರ್ಯದರ್ಶಿ ಉಬೈದ್  ಅಮ್ಮೆಂಬಳ  ಧನ್ಯವಾದ  ಸಮರ್ಪಿಸಿದರು.

Join Whatsapp