ಉಳ್ಳಾಲ | ಮದನಿ ನಗರದಲ್ಲಿ ಕಂಪೌಂಡ್ ಕುಸಿದು ನಾಲ್ವರು ಮೃತ್ಯು: ಎಸ್‌ಡಿಪಿಐ ಸಂತಾಪ

Prasthutha|

- Advertisement -

ಉಳ್ಳಾಲ: ಕುತ್ತಾರು ಸಮೀಪದ ಮದನಿನಗರದಲ್ಲಿ ಇಂದು ಮುಂಜಾನೆ ಆವರಣ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ದಂಪತಿ ನಾಲ್ವರು ಮೃತಪಟ್ಟ ಘಟನೆಗೆ ಎಸ್‌ಡಿಪಿಐ ಉಳ್ಳಾಲ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಬಶೀರ್ ಎಸ್.ಎಮ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಮೇಲಿನ ಮನೆಗೆ ಅಳವಡಿಸಲಾಗಿದ್ದ ಆವರಣ ಗೋಡೆ ಕುಸಿದು ಯಾಸೀರ್, ಪತ್ನಿ ಮರಿಯಮ್ಮ, ಪುತ್ರಿಯರಾದ ರಿಯಾನ, ರಿಫಾನ ಎಂಬವರು ಮೃತಪಟ್ಟಿದ್ದರು.

- Advertisement -

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಎಸ್‌ಡಿಪಿಐ ಕ್ಷೇತ್ರಧ್ಯಕ್ಷರ ಬಶೀರ್ ಎಸ್.ಎಮ್ ತೀವ್ರ ಸಂತಾಪ ಸೂಚಿಸಿ, ಸೃಷ್ಟಿಕರ್ತನು ಮೃತರ ಕುಟುಂಬಸ್ಥರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ತಮ್ಮ ಸಂತಾಪ ಸೂಚಕವನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp