ಉಳ್ಳಾಲ | ನಿಂತಿದ್ದ ಲಾರಿಗೆ ಸ್ಕೂಟರ್’ಗಳ ಢಿಕ್ಕಿ: ಓರ್ವ ಸವಾರ ಮೃತ್ಯು

Prasthutha|

ಉಳ್ಳಾಲ: ಸೇತುವೆ ಮೇಲೆ ಕೆಟ್ಟು ನಿಂತಿದ್ದ ಲಾರಿಗೆ ಎರಡು ಸ್ಕೂಟರ್’ಗಳು ಡಿಕ್ಕಿ ಹೊಡೆದು ಓರ್ವ ಸವಾರ ಮೃತಪಟ್ಟಿರುವ ಘಟನೆ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

- Advertisement -

ಅಂಗರಗುಂಡಿ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮುಹಮ್ಮದ್ ನೌಫಾಲ್ (26) ಮೃತಪಟ್ಟಿದ್ದಾರೆ. ಇನ್ನೊಂದು ಸ್ಕೂಟರಿನಲ್ಲಿದ್ದ ಗಾಯಾಳುಗಳ ವಿವರ ತಿಳಿದುಬಂದಿಲ್ಲ.

ಬೈಕಂಪಾಡಿ ಎಪಿಎಂಸಿಯಲ್ಲಿರುವ ಮಳಿಗೆಗೆ ತರಕಾರಿ ತರಲು ನೌಫಾಲ್ ಅವರು ಕಲ್ಲಾಪು ಗ್ಲೋಬಲ್ ಮಾರುಕಟ್ಟೆಗೆ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

- Advertisement -

 ಮರಣೋತ್ತರ ಪರೀಕ್ಷೆ ಬಳಿಕ ಮಂಗಳೂರು ಕೇಂದ್ರ ಜುಮಾ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವಹಿಸಿದ ಬಳಿಕ ಪ್ರಾರ್ಥಿವ ಶರೀರವನ್ನು ಅಂಗರಗುಂಡಿಯ ಮನೆಗೆ ತಂದು ಅಂಗರಗುಂಡಿ ಖಬರಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ

 ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp