ಉಳ್ಳಾಲ ಠಾಣೆಯ ಪೊಲೀಸರ ಕಾರ್ಯಾಚರಣೆ: ವಾರದ ಅಂತರದಲ್ಲಿ 2ನೇ ಪ್ರಕರಣ; ಮಾದಕ ವಸ್ತುಗಳು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

Prasthutha|

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಉಚ್ಚಿಲ ರಿಲಯನ್ಸ್ ಪೆಟ್ರೋಲ್ ಪಂಪ್ ಎಂಬಲ್ಲಿ MDMA ಎಂಬ ಮಾದಕವಸ್ತು ಮಾರಾಟ ಮಾಡಲು ಬಂದಿದ್ದ ಆರೋಪಿಗಳನ್ನು ಶುಕ್ರವಾರ ಬೆಳಗ್ಗಿನ ಜಾವ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

- Advertisement -


ಬಂಧಿತ ಇಬ್ಬರು ಯುವಕರು ಡಿಯೊ ಸ್ಕೂಟರ್’ನಲ್ಲಿ ತಲಪಾಡಿಯಿಂದ ಉಚ್ಚಿಲ ರಿಲಯನ್ಸ್ ಪೆಟ್ರೋಲ್ ಪಂಪ್ ಕಡೆಗೆ MDMA ಹೊಂದಿರುವ ಪಾಕೆಟ್ ಸಮೇತ ಸ್ಕೂಟರ್’ನಲ್ಲಿ ಹೊಗುತ್ತಿದ್ದ ಸಮಯದಲ್ಲಿ ಉಳ್ಳಾಲ ಪೊಲೀಸರು ಸ್ಕೂಟರ್ ಅನ್ನು ಅಡ್ಡಗಟ್ಟಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಳ್ಳಾಲ ಆಝಾದ್ ನಗರದ ಒಂದನೇ ಕ್ರಾಸ್ ನಿವಾಸಿ ದಿವಂಗತ ಮುಹಮ್ಮದ್ ಎಂಬವರ ಮಗ ಮುಹಮ್ಮದ್ ಖಾಲಿದ್ (39) ಹಾಗು ಮಂಜೇಶ್ವರ ಕುಂಜತ್ತೂರು ಸಮೀಪದ ಪದವು ಶಾಲೆಯ ನಿವಾಸಿ ಬಾಲಕೃಷ್ಣ ಎಂಬವರ ಮಗ ಲಿಖಿತ್ ಎಂದು ಗುರುತಿಸಲಾಗಿದೆ.


ಬಂಧಿತರಿಂದ ಸುಮಾರು 20 ಸಾವಿರ ಮೌಲ್ಯದ 10 ಗ್ರಾಂ MDMA, ಸುಮಾರು 50 ಸಾವಿರ ಮೌಲ್ಯದ ಒಂದು ಸ್ಕೂಟರ್, ಸುಮಾರು 25000 ಮೌಲ್ಯದ 2 ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿಂದೆ ಆರೊಪಿಗಳ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಗಾಂಜಾ ಮಾರಾಟದಂತಹ ಪ್ರಕರಣಗಳು ದಾಖಾಲಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ಅವರ ಮಾರ್ಗದರ್ಶನದಲ್ಲಿ PSI ಗಳಾದ ರೇವಣಸಿದ್ದಪ್ಪ, ಪ್ರದೀಪ್ ಟಿ.ಆರ್, ಶಿವಕುಮಾರ್, ಸಿಬ್ಬಂದಿಗಳಾದ ರಂಜಿತ್, ಅಶೋಕ್, ಅಕ್ಬರ್, ಸಾಗರ್, ವಾಸುದೇವ್, ಸತೀಶ್, ಚಿದಾನಂದ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp