ಕುಸಿಯುವ ಭೀತಿಯಲ್ಲಿ ಉಳಾಯಿಬೆಟ್ಟು ಕಿರು ಸೇತುವೆ

Prasthutha|

ಮಂಗಳೂರು: ಭಾರಿ ಮಳೆಯಿಂದಾಗಿ ತಾಲೂಕಿನ ಉಳಾಯಿಬೆಟ್ಟು ಗ್ರಾಮದಲ್ಲಿರುವ ಬ್ರಿಟೀಷರ ಕಾಲದ ಕಿರುಸೇತುವೆ ಕುಸಿಯುವ ಭೀತಿಯಲ್ಲಿದೆ.

- Advertisement -

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ  ಉಳಾಯಿಬೆಟ್ಟು ಮತ್ತು ಮಂಗಳೂರು ಸಂಪರ್ಕಿಸುವ ಈ ಕಿರುಸೇತುವೆ ಸುಮಾರು 80 ವರ್ಷದಷ್ಟು ಹಳೆಯದಾಗಿದ್ದು, ಈ ರಸ್ತೆ  ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದೆ.

ಕಳೆದ ಹಲವು ವರ್ಷಗಳಿಂದ ಈ ಕಿರುಸೇತುವೆ ದುಸ್ಥಿತಿಯಲ್ಲಿದ್ದು ಸೇತುವೆಯ ಎರಡೂ ತುದಿಯ ರಸ್ತೆ ಮತ್ತು ತಡೆಗೋಡೆ ಬಿರುಕುಬಿಟ್ಟಿವೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಈ ಕಿರುಸೇತುವೆ ಕುಸಿಯುವ ಭೀತಿಯಲ್ಲಿದೆ. ಇದರಿಂದ ಸ್ಥಳೀಯ ಜನರು ಆತಂಕದಲ್ಲಿದ್ದಾರೆ.

- Advertisement -

ಸ್ಥಳಕ್ಕೆ ಊರಿನ ಪ್ರಮುಖರು, ಹಿರಿಯರು ಮತ್ತು ಎಸ್.ಡಿ.ಪಿ.ಐ ಉಳಾಯಿಬೆಟ್ಟು ಗ್ರಾಮ ಸಮಿತಿ ಮುಖಂಡರು  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು.  

ಈ ಸಂದರ್ಭದಲ್ಲಿ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಅಝರ್ ಉಳಾಯಿಬೆಟ್ಟು, ಎಸ್.ಡಿ.ಪಿ.ಐ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ನಾಸಿರ್ ಉಳಾಯಿಬೆಟ್ಟು, ಗ್ರಾಮ ಸಮಿತಿ ಅಧ್ಯಕ್ಷ  ಇಕ್ಬಾಲ್ ಉಳಾಯಿಬೆಟ್ಟು , ಕಾರ್ಯದರ್ಶಿ ಸಲಾಂ ಉಳಾಯಿಬೆಟ್ಟು, ಎಸ್.ಡಿ.ಪಿ.ಐ ಅಡ್ಯಾರ್ ಬ್ಲಾಕ್ ಉಪಾಧ್ಯಕ್ಷ ಆಮೀರ್ ಉಳಾಯಿಬೆಟ್ಟು ಹಾಗೂ ಊರಿನ ಹಿರಿಯ  ನಾಗರಿಕರು ಉಪಸ್ಥಿತರಿದ್ದರು.



Join Whatsapp