ಮಂಗಳೂರು: ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ಇಂದು ನಡೆದಿದ್ದು, ಕಾಂಗ್ರೆಸ್ ನ ಓರ್ವ ಬೆಂಬಲದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದೆ.
ಕಾಂಗ್ರೆಸ್ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಒಟ್ಟು 11 ಸ್ಥಾನಗಳ ಪೈಕಿ 5 ಬಿಜೆಪಿ 3 ಕಾಂಗ್ರೆಸ್ 3 ಎಸ್ ಡಿ ಪಿ ಐ ಸದಸ್ಯರುಗಳಿದ್ದಾರೆ. ಇಲ್ಲಿ ಅಧಿಕಾರದಲ್ಲಿ ಪಾಲುದಾರರು ಆಗಲು ಎಸ್. ಡಿ. ಪಿ.ಐ ಕಾಂಗ್ರೆಸ್ ನೊಂದಿಗೆ ಬೆಂಬಲ ಕೇಳಿತ್ತು. ಆದರೆ ಕಾಂಗ್ರೆಸ್ ಬೆಂಬಲ ನೀಡದ ಕಾರಣ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಕೇಶ್ ಶೆಟ್ಟಿ 6 ಮತಗಳೊಂದಿಗೆ ಜಯಗಳಿಸಿದ್ದರು. ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ 5 ಮತಗಳೊಂದಿಗೆ ಜಯಗಳಿಸಿದರು.