ನ್ಯಾಟೋ ವಿರುದ್ಧ ಉಕ್ರೇನ್‌ ಅಧ್ಯಕ್ಷ ಕಿಡಿ

Prasthutha|

ಕೀವ್ : ಪಾಶ್ಚಾತ್ಯ ರಾಷ್ಟ್ರಗಳು ನಮಗೆ ನೆರವು ನೀಡುವುದಾಗಿ ವಾಗ್ಧಾನ ನೀಡಿದ್ದವು. ಆದರೆ ಅವು ನಮ್ಮ ನಗರಗಳನ್ನು ರಕ್ಷಿಸಲು ಸಹಕರಿಸದೆ ಸುಮ್ಮನೆ ಕುಳಿತಿವೆ. ಇದರಿಂದ ನಮ್ಮ ನಗರಗಳ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ ಎಂದು ವೊಲೋಡಿಮಿರ್ ಝೆಲೆನ್ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

 ಉಕ್ರೇನ್‌ನಿಂದ ನಾನೆಲ್ಲಿಗೂ ಓಡಿ ಹೋಗಿಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ ಎಂದು ತಾವಿರುವ ಸ್ಥಳದ ವಿವರವನ್ನೂ ಪ್ರಕಟಿಸಿದ್ದಾರೆ.

‘ನಾನು ಉಕ್ರೇನ್‌ ರಾಜಧಾನಿ ಕೀವ್‌ನ ಬಂಕೋವಾದಲ್ಲೇ ವಾಸವಿದ್ದೇನೆ. ನನ್ನ ತಂಡ ನನ್ನ ಜೊತೆಗಿದೆ. ವೈದ್ಯರು, ರಕ್ಷಕರು, ಸಾರಿಗೆ ಸಿಬ್ಬಂದಿ, ಪತ್ರಕರ್ತರು ಹೀಗೆ ಎಲ್ಲರೂ ಯುದ್ಧದಲ್ಲಿದ್ದೇವೆ. ಈ ಯುದ್ಧವನ್ನು ಗೆದ್ದೇ ಗೆಲ್ಲುತ್ತೇವೆ. ಶತ್ರುಗಳಿಂದ ನಾಶವಾಗಿರುವ ನಗರಗಳನ್ನು ಮರುಸ್ಥಾಪಿಸುತ್ತೇವೆ’ ಎಂದು ಹೇಳಿದರು.



Join Whatsapp