50 ರಷ್ಯನ್ ಸೈನಿಕರನ್ನು ಕೊಲ್ಲಲಾಗಿದೆ । ಉಕ್ರೇನ್ ಘೋಷಣೆ

Prasthutha|

ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಈ ಮಧ್ಯೆ ಸುಮಾರು ಐವತ್ತು ರಷ್ಯನ್ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಹೇಳಿದೆ. ರಷ್ಯಾದ ಪಡೆಗಳು ಹಲವಾರು ದಿಕ್ಕುಗಳಿಂದ ಉಕ್ರೇನ್ ದಾಟಿದ ಕೆಲವು ಗಂಟೆಗಳ ಬಳಿಕ ಉಕ್ರೇನ್ ಕಡೆಯಿಂದ ಈ ಘೋಷಣೆ ಹೊರಬಿದ್ದಿದೆ.

- Advertisement -

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಯುದ್ಧಕ್ಕೆ ಅನುಮತಿ ಸೂಚಿಸಿದ ಬಳಿಕ ರಷ್ಯಾ ಪಡೆಗಳು ಉಕ್ರೇನ್ ನಗರಗಳ ಮೇಲೆ ನಿರಂತರ ಕ್ಷಿಪಣಿ ದಾಳಿ ನಡೆಸುತ್ತಿದೆ. ಉಕ್ರೇನ್ ರಾಜಧಾನಿ ಕೈವ್’ನಲ್ಲಿ ಸ್ಫೋಟ ನಡೆದಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ. ರಾಜಧಾನಿ ಪ್ರಮುಖ ವಿಮಾನ ನಿಲ್ದಾಣದ ಬಳಿಯೂ ಗುಂಡಿನ ಸದ್ದು ಕೇಳಿಸುತ್ತಿದೆ.

ಈ ಮಧ್ಯೆ ಕ್ರಿಮಿಯನ್ ಗಡಿ ಭಾಗದಲ್ಲಿ ನಡೆದ ರಾಕೆಟ್ ದಾಳಿಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಗಡಿ ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಇದು ರಷ್ಯಾ ಆಕ್ರಮಿಸಿದ ಬಳಿಕ ಉಕ್ರೇನ್ ಸೇನೆ ದೃಢಪಡಿಸಿದ ಮೊದಲ ಅಧಿಕೃತ ವರದಿಯಾಗಿದೆ.
ರಷ್ಯಾದ ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರದೊಂದಿಗೆ ಉಕ್ರೇನ್ ನಲ್ಲಿ ವಾಯು ನೆಲೆಗಳನ್ನು ನಾಶಪಡಿಸಿದೆ ರಷ್ಯಾ ತಿಳಿಸಿವೆ.

- Advertisement -

ಪೂರ್ವ ಉಕ್ರೇನ್ ನಲ್ಲಿ ರಷ್ಯಾದ ಐದು ವಿಮಾನ ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.



Join Whatsapp