ಉಕ್ರೇನ್‌: ಕೆರ್ಸಾನ್‌ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ; 16 ಸಾವು, 64 ಮಂದಿಗೆ ಗಾಯ

Prasthutha|

- Advertisement -

ಯುದ್ಧವನ್ನು ಅಂತ್ಯಗೊಳಿಸುವುದಾಗಿ ಹೇಳಿದ ಬಳಿಕವೂ ಉಕ್ರೇನ್‌ ಮೇಲಿನ ದಾಳಿಯನ್ನು ರಷ್ಯಾ ಮುಂದುವರಿಸಿದೆ. ಉಕ್ರೇನಿನ ಕೆರ್ಸಾನ್‌ ಒಬ್ಲಾಸ್ಟ್‌ ಭಾಗದಲ್ಲಿ ಕ್ರಿಸ್‌ಮಸ್‌ ಸಂದರ್ಭದಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 64 ಜನರು ಗಾಯಗೊಂಡಿದ್ದಾರೆ.

ಶನಿವಾರ ನಗರ ಕೇಂದ್ರ, ಕೈಗಾರಿಕಾ ಆವರಣ, ವೈದ್ಯಕೀಯ ಸಂಸ್ಥೆಗಳು, ಅಪಾರ್ಟ್ಮೆಂಟ್ ಕಟ್ಟಡಗಳ ಮೇಲೆ ರಷ್ಯಾ ಪಡೆಗಳು ಶೆಲ್ ದಾಳಿ ನಡೆಸಿವೆ ಎಂದು ʻಉಕ್ರೇನ್ಸ್ಕಾ ಪ್ರಾವ್ಡಾʼ ಪತ್ರಿಕೆ ವರದಿ ಮಾಡಿದೆ.

- Advertisement -

ʻಕಳೆದೊಂದು ದಿನದಲ್ಲಿ, ರಷ್ಯಾ ಸೈನ್ಯವು ಖೆರ್ಸನ್ ಪ್ರದೇಶದಲ್ಲಿ 16 ಜನರನ್ನು ಬಲಿಪಡೆದಿದೆ. ಮೃತರಲ್ಲಿ ರಾಜ್ಯ ತುರ್ತು ಸೇವೆಯ ಮೂವರು ನೌಕರರು ಸೇರಿದ್ದಾರೆ. ಮೃತ ನೌಕರರು ಬೆರಿಸ್ಲಾವ್ ಜಿಲ್ಲೆಯಲ್ಲಿ ಗಣಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ದಾಳಿಗೆ ಸಿಲುಕಿದ್ದಾರೆ.  ಇನ್ನೂ 64 ಜನರಿಗೆ ತೀವ್ರ ತರದ ಗಾಯಗಳಾಗಿದೆʼ ಎಂದು ಖೆರ್ಸನ್ ಒಬ್ಲಾಸ್ಟ್ ಮಿಲಿಟರಿ ಆಡಳಿತದ ಮುಖ್ಯಸ್ಥ ಯಾರೋಸ್ಲಾವ್ ಯಾನುಶೆವಿಚ್, ತಮ್ಮ  ಟೆಲಿಗ್ರಾಮ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Join Whatsapp