ಉಕ್ರೇನ್-ರಷ್ಯಾ ಕದನ; ಉಕ್ರೇನ್‌ ನ ಬಂದರು ನಗರ ‘ಒಡೆಶಾ’ ಮೇಲೆ ರಷ್ಯಾ ದಾಳಿ

Prasthutha|

ಕೀವ್‌: ಉಕ್ರೇನ್‌ನ ಮೇಲೆ ರಷ್ಯಾದ ದಾಳಿ ಮುಂದುವರಿದಿದ್ದು, ರಾಜಧಾನಿ ಕೀವ್‌ ಹಾಗೂ ಅದರ ಹೊರವಲಯಗಳಲ್ಲಿ ವಿಧ್ವಂಸಕ ಶಕ್ತಿಪ್ರದರ್ಶನ ನಡೆಸುತ್ತಿದ್ದ ರಷ್ಯಾದ ಪಡೆಗಳು, ಇದೀಗ ಉಕ್ರೇನ್‌ನ ಬೇರೊಂದು ಪಾರ್ಶ್ವವಾದ ಕಪ್ಪು ಸಮುದ್ರಕ್ಕೆ ಅಂಟಿಕೊಂಡಿರುವ ಉಕ್ರೇನ್‌ನ ದಕ್ಷಿಣ ಭಾಗದಲ್ಲಿರುವ  ಬಂದರು ನಗರ ಒಡೆಶಾದ ಮೇಲೆ ರಷ್ಯಾದ ಪಡೆಗಳು ಹೇರಳವಾಗಿ ಕ್ಷಿಪಣಿ ದಾಳಿ ನಡೆಸಿವೆ.

- Advertisement -

ಒಡೆಶಾದ ಹಲವು ಕಡೆ ಸ್ಫೋಟದ ಸದ್ದು ಕೇಳಿಬಂದ ಬೆನ್ನಲ್ಲೇ ಮುಗಿಲೆತ್ತರಕ್ಕೆ ಚಿಮ್ಮಿದ ಹೊಗೆ ಇಡೀ ನಗರದಾದ್ಯಾಂತ ಆವರಿಸಿದೆ. ಜನರೆಲ್ಲಾ ಗಾಢ ನಿದ್ದೆಯಲ್ಲಿದ್ದ ಸಮಯದಲ್ಲಿ ದಾಳಿ ನಡೆಸಲಾಗಿದ್ದು ಹಲವಾರು ಸಾವು ನೋವು ಸಂಭವಿಸಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ನಗರದ ಪ್ರಮುಖ ಕಟ್ಟಡಗಳು ಹಾಗೂ ಸ್ಥಳಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಕೀವ್‌ ನಗರದ ಹೊರವಲಯದಿಂದ ಹಿಂದಕ್ಕೆ ಸರಿಯುವ ಮೂಲಕ ತಾನು ಉಕ್ರೇನ್‌ ರಾಜಧಾನಿಯನ್ನು   ತೆರವುಗೊಳಿಸಿರುವುದಾಗಿ ರಷ್ಯಾ ಹೇಳಕೂಡದು. ಏಕೆಂದರೆ, ಕೀವ್‌ನಿಂದ ಹೊರಹೋದ ಮಾತ್ರಕ್ಕೆ ಯುದ್ಧದಿಂದ ಹೊರನಡೆದಂತಾಗುವುದಿಲ್ಲ ಎಂದು ನ್ಯಾಟೋ ಪಡೆಗಳ ಪ್ರಧಾನ ಕಾರ್ಯದರ್ಶಿ ಜೆನ್ಸ್‌ ಸ್ಟಾಲ್ಟನ್‌ಬರ್ಗ್‌ ಹೇಳಿದ್ದಾರೆ.



Join Whatsapp